ಹೊನ್ನಾವರ :ತಾಲ್ಲೂಕಿನ ಅಳ್ಳಂಕಿಯ ವರಸಿದ್ದಿ ಗಣಪತಿ ದೇವರ ವರ್ಷಾವಧಿ ತಾಂತ್ರಿಕ ವರ್ಧಂತಿ ಮಹೊತ್ಸವ ಕಾರ್ಯಕ್ರಮವು ಪೆ.16 ರಂದು ವೇ.ಮೂ.ಕಟ್ಟೆ ಶಂಕರ ಪರಮೇಶ್ವರ ಭಟ್ಟ ಆಚಾರ್ಯತ್ವದಲ್ಲಿ ನಡೆಯಲಿದೆ.
ಲೋಕಕಲ್ಯಾಣಾರ್ಥವಾಗಿ ಅಂದು ಬೆಳಿಗ್ಗೆ ದೇವತಾ ಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು ವಿಶೇಷ ವಿನಾಯಕ ಶಾಂತಿ, ಕಲಶಾಭಿಷೇಕ, ಪೂರ್ಣಾಹುತಿ,ಅಲಂಕಾರ ಪೂಜೆ, ಮದ್ಯಾಹ್ನ ಸಾಮೂಹಿಕ ಸತ್ಯನಾರಾಯಣ ವ್ರತ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಮದ್ಯಾಹ್ನ 1ರಿಂದ 3 ಘಂಟೆಯವರೆಗೆ ಅನ್ನಸಂತರ್ಪಣೆ ಇರುತ್ತದೆ. ಸಂಜೆ 6.00ರಿಂದ ಭೇರಿತಾಡನ, ರಂಗಪೂಜೆ, ಮಹಾಬಲಿ, ರಾಜೊಪಚಾರ ಸೇವೆ, ಮಹಾಮಂಗಳಾರತಿ, ಪ್ರಾರ್ಥನೆ, ಪ್ರಸಾದ ವಿತರಣೆ ನಡೆಯಲಿದೆ.
ನಂತರ ಖ್ಯಾತ ಹಿಂದುಸ್ಥಾನಿ ಗಾಯಕ ರಾಘವೇಂದ್ರ ಭಟ್ ಸಾಗರ್, ವಿದ್ವಾನ್ ಎನ್. ಜಿ. ಹೆಗಡೆ, ವಿದ್ವಾನ್ ಶೇμÁದ್ರಿ ಅಯ್ಯಂಗಾರ್ ಮತ್ತು ಹರಿಶ್ಚಂದ್ರ ನಾಯ್ಕ ಇವರ ತಂಡದಿಂದ ದಾಸವಾಣಿ ಸಂಗೀತ ಮತ್ತು ರಾಜು ಸೊಂದಾ ಅವರಿಂದ ನಗು ನಲಿ ಸೇವೆ ನಡೆಯಲಿದೆ. ಅಂದಿನ ಕಾರ್ಯಕ್ರಮದಲ್ಲಿ ಹೆಚ್ಚಿನ ಭಕ್ತರು ಪಾಲ್ಗೊಳ್ಳುವ ಜೊತೆಯಲ್ಲಿ ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸಿ ದೇವತಾ ಕಾರ್ಯಗಳನ್ನು ಸಹಕರಿಸಬೇಕೆಂದು ಎಂದು ದೇವಸ್ಥಾನ ಸಮಿತಿಯ ಕೋರಿದ್ದಾರೆ.