ಶಿರಸಿ: ತಾಲೂಕಾ ವ್ಯವಸಾಯ ಹುಟ್ಟುವಳಗಳ ಸಹಕಾರಿ ಮಾರಾಟ ಸಂಘ ನಿ., ಶಿರಸಿ ಇವರಿಂದ ಟಿ.ಎಂ.ಎಸ್. ಸುರಕ್ಷಾ ಸಾವಯವ ಗೊಬ್ಬರ ಬಿಡುಗಡೆ ಹಾಗೂ ವ್ಯಾಪಾರಿ ಮಳಿಗೆಯ ಉದ್ಘಾಟನಾ ಕಾರ್ಯಕ್ರಮ ಫೆ.12 ರಂದು ಶನಿವಾರ ಮಧ್ಯಾಹ್ನ 3 ಘಂಟೆಗೆ ಟಿ.ಎಂ.ಎಸ್. ದಾಸನಕೊಪ್ಪ ಶಾಖೆಯ ಎ.ಪಿ.ಎಂ.ಸಿ. ಸಬ್ ಮಾರ್ಕೆಟ್ ಯಾರ್ಡನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಉದ್ಘಾಟಿಸಿ, ಟಿ.ಎಂ.ಎಸ್. ಸುರಕ್ಷಾ ಸಾವಯವ ಗೊಬ್ಬರ ಬಿಡುಗಡೆಗೊಳಿಸಲಿದ್ದು, ವ್ಯಾಪಾರಿ ಮಳಿಗೆಯನ್ನು ಎ.ಪಿ.ಎಂ.ಸಿ. ಶಿರಸಿ ಅಧ್ಯಕ್ಷ ಶಿವಕುಮಾರ ಗೌಡರ್ ಉದ್ಘಾಟಿಸಲಿದ್ದಾರೆ.
ಶಿರಸಿ ಟಿ.ಎಂ.ಎಸ್ ಅಧ್ಯಕ್ಷ ಜಿ. ಎಂ. ಹೆಗಡೆ, ಹುಳಗೋಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಧಾರವಾಡ ಹಾಲು ಒಕ್ಕೂಟ ಹಾಗೂ ಕೆ.ಡಿ.ಸಿ.ಸಿ ಬ್ಯಾಂಕ್ ಲಿ., ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ,ಬದನಗೋಡ ಗ್ರಾಮ ಪಂಚಾಯತ ಅಧ್ಯಕ್ಷೆ ಗೀತಾ ಸದಾನಂದ ಅಲೂರು, ಎ.ಪಿ.ಎಂ.ಸಿ ಸದಸ್ಯ ಸುನೀಲ ನಾಯ್ಕ ಹಾಗೂ ಅಲ್ಪಾನ್‌ಹ್ಯಾಮ್ ಲೈಫ್ ಸೈನ್ಸ್ ನ ಸಂಜಯ ಪಾಟೀಲ್ ಉಪಸ್ಥಿತರಿರಲಿದ್ದಾರೆ.