Slide
Slide
Slide
previous arrow
next arrow

ಸುವಿಚಾರ

300x250 AD


ಲಕ್ಷ್ಮೀವಂತೋ ನ ಜಾನಂತಿ ಪ್ರಾಯೇಣ ಪರವೇದನಾಮ್
ಶೇಷೇ ಧರಾಭರಕ್ಲಾಂತೇ ಶೇತೇ ನಾರಾಯಣಃ ಸುಖಮ್ ||

ಹಣವುಳ್ಳವರ ಕುರಿತಾದ ಸಣ್ಣದೊಂದು ಅಸಮಾಧಾನವನ್ನು ಬಹಳಷ್ಟು ಸಂದರ್ಭದಲ್ಲಿ, ವಿವಿಧ ಭಾಷೆಗಳ ಸಾಹಿತ್ಯದಲ್ಲಿ ನೋಡಬಹುದು. ಸುಭಾಷಿತ ಸಾಹಿತ್ಯವೂ ಇದಕ್ಕೆ ಹೊರತಲ್ಲ. ಲಕ್ಷ್ಮೀವಂತರು (ಹಣವುಳ್ಳವರು) ಬಹುಶಃ ಇನ್ನೊಬ್ಬರ ನೋವನ್ನು ಅರ್ಥಮಾಡಿಕೊಳ್ಳಲಾರರು. ಉದಾಹರಣೆಗೆ ನೋಡಿ, ಲಕ್ಷ್ಮೀವಂತನಾದ (ಲಕ್ಷ್ಮಿಯ ಪತಿಯಾದ) ನಾರಾಯಣನು, ಭೂಮಿಯನ್ನು ಹೊತ್ತು ಬಸವಳಿದ ಶೇಷ ನಾಗನ ಮೈಮೇಲೆ ಆರಾಮವಾಗಿ ಪವಡಿಸುತ್ತಾನೆ! ಶೇಷನಾಗನನ್ನು ತ್ರಸ್ತನಂತೆಯೂ, ಅವನ ಮೈ ಮೇಲೆ ಪವಡಿಸುವ ಶ್ರೀಮನ್ನಾರಾಯಣನು ಲಕ್ಷ್ಮೀಪತಿಯಾದ ಕಾರಣಕ್ಕೆ ಹಣವಂತನೆಂದೂ ತೋರಿಸಿರುವುದು ಯಥಾರ್ಥವಲ್ಲ, ಕವಿಯ ದೃಷ್ಟಿಯಷ್ಟೆ.
ಶ್ರೀ ನವೀನ ಗಂಗೋತ್ರಿ

300x250 AD
Share This
300x250 AD
300x250 AD
300x250 AD
Back to top