ಮುಂಡಗೋಡ: ಅರಣ್ಯ ಭೂಮಿ ಹೋರಾಟದ ೩೦ ವರ್ಷದ ಸ್ಮರಣ ಸಂಚಿಕೆ, ಸರಕಾರದ ಪ್ರತಿನಿಧಿಯೊಂದಿಗೆ ಚರ್ಚೆಗೆ ಫೇ. ೧೭, ಗುರುವಾರದಂದು ಬೆಂಗಳೂರಿನಲ್ಲಿ ಜರಗುವ ಕಾರ್ಯಕ್ರಮದ ಮಾಹಿತಿ ಹಾಗೂ ಪ್ರತೀ ಸೋಮವಾರ ಅರಣ್ಯವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರೀಯೆ ಜರುಗಿಸಬೇಕೆಂಬ ಅರಣ್ಯ ಇಲಾಖೆಯ ಆದೇಶಗಳ ಮಾಹಿತಿಯನ್ನು ನೀಡುವ ಉದ್ದೇಶದಿಂದ ಮುಂಡಗೋಡ ತಾಲೂಕ ಅರಣ್ಯ ಅತೀಕ್ರಮಣದಾರರ ಸಭೆಯನ್ನು, ಫೇ. ೧೪ ರ ಸೋಮವಾರದಂದು ಬೆಳಿಗ್ಗೆ ೧೦:೦೦ ಘಂಟೆಗೆ, ಪ್ರವಾಸ ಮಂದಿರ(ಐಬಿ) ಮುಂಡಗೋಡದಲ್ಲಿ ಸಂಘಟಿಸಲಾಗಿದೆ ಎಂದು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತ ಅತೀಕ್ರಮಣದಾರರು ಸಭೆಗೆ ಆಗಮಿಸಲು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಕೋರಿದ್ದಾರೆ.