• Slide
    Slide
    Slide
    previous arrow
    next arrow
  • ಫೆ.17ಕ್ಕೆ ಸರಕಾರದೊಂದಿಗೆ ಸಂವಾದ; ಅರಣ್ಯ ಭೂಮಿ ಚಿಂತನ ಕೂಟ

    300x250 AD

    ಶಿರಸಿ: ಅರಣ್ಯವಾಸಿಗಳ ೩೦ ವರ್ಷ ಹೋರಾಟದ ಸ್ಮರಣ ಸಂಚಿಕೆ ಬಿಡುಗಡೆ, ಸರಕಾರದೊಂದಿಗೆ ಸಂವಾದ ಹಾಗೂ ರಾಜ್ಯ ಮಟ್ಟದ ಅರಣ್ಯ ಭೂಮಿ ಹಕ್ಕು ಚಿಂತನ ಕೂಟ ಕಾರ್ಯಕ್ರಮವನ್ನ ಫೇ. ೧೭, ಗುರುವಾರದಂದು ಬೆಂಗಳೂರಿನಲ್ಲಿ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

    ಅವರು ಇಂದು ಶಿರಸಿಯ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆ ಕಾರ್ಯಾಲಯದಲ್ಲಿ ಅರಣ್ಯ ಅತಿಕ್ರಮಣದಾರರನ್ನು ಉದ್ದೇಶಿಸಿ ಮಾತನಾಡುತ್ತಾ ಮೇಲಿನಂತೆ ಹೇಳಿದರು.

    ಕಾರ್ಯಕ್ರಮದಲ್ಲಿ ಸರಕಾರದ ಮಟ್ಟದ ವಿವಿಧ ಸ್ತರದ ಗಣ್ಯರನ್ನು ಆಮಂತ್ರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

    ಉತ್ತರ ಕನ್ನಡ ಜಿಲ್ಲೆ ಮತ್ತು ರಾಜ್ಯದ ೧೬ ಜಿಲ್ಲೆಗಳಲ್ಲಿ ನಿರಂತರ ೩೦ ವರ್ಷ ಸಂಘಟನೆ, ಹೋರಾಟ, ಆಂದೋಲನ ಜರುಗಿಸಿರುವ ವೇದಿಕೆಯ ಸಮಗ್ರ ಮಾಹಿತಿ ಲೇಖನ ಹೋರಾಟದ ಕಾನೂನು ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿದ ಆದೇಶವನ್ನು ೧೦೬ ಪುಟಗಳ ಸಮಗ್ರ ದಾಖಲೆಗಳೊಂದಿಗೆ ಸ್ಮರಣ ಸಂಚಿಕೆಯು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.

    300x250 AD

    ಸಭೆಯಲ್ಲಿ ತಾಲೂಕ ಅಧ್ಯಕ್ಷ ಲಕ್ಮಣ ಮಾಳ್ಳಕ್ಕನವರು ಸಭೇಯ ಅಧ್ಯಕ್ಷತೆಯನ್ನು ವಹಿಸಿದ್ದರು, ರಾಜು ನೇತ್ರೇಕರ್, ರಾಜು ನರೇಬೈಲ್, ದೇವರಾಜ ಮರಾಠಿ, ಚಂದ್ರು ನಾಯ್ಕ, ಇಬ್ರಾಹಿಂ ಗೌಡಳ್ಳಿ, ನೇಹರೂ ನಾಯ್ಕ ಬಿಳೂರು, ನಾರಾಯಣ ಸರ್ವಾ ಗೌಡ, ಲಕ್ಷ್ಮಣ ನಾಯ್ಕ ದೊಡ್ನಳ್ಳಿ, ವಿದ್ಯಾಧರ ಶೆಟ್ಟಿ, ಗಣಪತಿ ನಾಯ್ಕ ಗೋಳಿ ಮುಂತಾದವರು ಉಪಸ್ಥಿತರಿದ್ದರು.

    ರಾಜ್ಯ ಮಟ್ಟದ ಚಿಂತನ ಕೂಟ:
    ವಿವಿಧ ರೈತ ಸಂಘಟನೆ, ನೀವೃತ್ತ ನ್ಯಾಯಮೂರ್ತಿಗಳು, ಕಾನೂನು ತಜ್ಞರು ವಿವಿಧ ಸಂಘಟನೆಗಳ ಧುರಿಣರು ಹಾಗೂ ರಾಜಕೀಯ ಧುರೀಣರೊಂದಿಗೆ ಭೂಮಿ ಹಕ್ಕು ಚಿಂತನ ಕೂಟವನ್ನು ಇದೇ ಸಂದರ್ಭದಲ್ಲಿ ಸಂಘಟಿಸಲಾಗಿದ್ದು, ಭೂಮಿ ಹಕ್ಕಿಗೆ ಕ್ರೀಯಾತ್ಮಕ ಹಾಗೂ ಕಾನೂನಾತ್ಮಕ ಮುಂದಿನ ಹೋರಾಟದ ರೂಪರೇಷೆಯನ್ನು ಚಿಂತನ ಕೂಟದಲ್ಲಿ ನಿರ್ಧರಿಸಲಾಗುವುದು ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top