ಶಿರಸಿ: ರಾಜರಾಜೇಶ್ವರೀ ವಿದ್ಯಾ ಸಂಸ್ಥೆ ಸೋಂದಾ, ಸ್ವರ್ಣವಲ್ಲೀ ಮಹಾಸಂಸ್ಥಾನದ ಅಂಗ ಸಂಸ್ಥೆಯಾದ ಶ್ರೀನಿಕೇತನ ಶಾಲೆಯ “ಲಿಯೊ ಕ್ಲಬ್ ಶ್ರೀನಿಕೇತನ” ವಿದ್ಯಾರ್ಥಿಗಳ ವತಿಯಿಂದ ಮಾಲಿನ್ಯ ವಿಷಯಕ್ಕೆ ಸಂಭಂದಿಸಿದಂತೆ ಜಾಗೃತಿ ಕರಪತ್ರ ಬಿಡುಗಡೆ ಗೊಳಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರೀಜನ್ ಚೇರ್ ಪರ್ಸನ್ (ಕೋಆರ್ಡಿನೇಟರ್) ಎಮ್‍ಜೆಫ್ ಲಯನ್ ರಾಜೇಶ ಸಾಲೆಹಿತ್ತಲ್ ಕರಪತ್ರ ಬಿಡುಗಡೆಗೊಳಿಸಿ, ಮಾಲಿನ್ಯ ನಿಯಂತ್ರಣ ಅತ್ಯವಶ್ಯಕ ಹಾಗೂ ಕಾಳಜಿಯ ವಿಷಯವಾಗಿದೆ, ಲಿಯೋ ಕ್ಲಬ್ ನ ವಿದ್ಯಾರ್ಥಿದೆಸೆಯಿಂದಲೇ ಇದರ ಜಾಗೃತಿ ಆರಂಭವಾಗಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಮಾಲಿನ್ಯ ನಿಯಂತ್ರಣ ಜಿಲ್ಲಾ ಚೇರ್‍ಪರ್ಸನ್ ಲಯನ್ ಗುರುರಾಜ್ ಹೊನ್ನಾವರ, ಲಿಯೊ ಸಲಹೆಗಾರರಾದ ಲಯನ್ ಅಶೋಕ ಹೆಗಡೆ , ಲಯನ್ಸ್ ಕ್ಲಬ್‍ನ ಅಧ್ಯಕ್ಷರಾದ ಎಮ್‍ಜೆಫ್, ಲಯನ್ ಉದಯ ಸ್ವಾದಿ, ಲಯನ್ ಕ್ಲಬ್ ಶಿರಸಿಯ ಕಾರ್ಯದರ್ಶಿಗಳಾದ ವಿನಯ ಹೆಗಡೆ, ಶಿರಸಿ ಹಾಗೂ ಹೊನ್ನಾವರ ಲಯನ್ಸ್ ಕ್ಲಬ್‍ನ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕರಪತ್ರವನ್ನು ಲಿಯೋ ಶ್ರೀನಿಕೇತನದ ಸದಸ್ಯರು ಮುಂದಿನ ದಿನಗಳಲ್ಲಿ ಜನಜಾಗೃತಿಯ ಕಾರ್ಯಕ್ರಮದ ಅಂಗವಾಗಿ ವಿತರಿಸಲಿದ್ದಾರೆ.