ಭಟ್ಕಳ: ನಗರದ ಆಸರಕೇರಿಯ ವೆಂಕಟೇಶ್ವರ ಯುವಕ ಸಂಘದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಲ್ಲಿನ ನಾಮಧಾರಿ ಗುರುಮಠದ ವರ್ಧಂತಿ ಉತ್ಸವದ ಅಂಗವಾಗಿ ಹಮ್ಮಿಕೊಂಡ ಸಾಂಸ್ಕ್ರತಿಕ ಕಾರ್ಯಕ್ರಮದ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶೈಕ್ಷಣಿಕವಾಗಿ ವಿಶೇಷ ಸಾಧನೆಗೈದ ಎಸ್.ಎಸ್.ಎಲ್.ಸಿ. ಪಿ.ಯುಸಿ. ಪದವಿ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಿಚ್ಚಲಮಕ್ಕಿ ತಿರುವಲ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಕೃಷ್ಣಾ ನಾಯ್ಕ, ವೆಂಕಟೇಶ್ವರ ಯುವಕ ಸಂಘದ ಅಧ್ಯಕ್ಷ ಶ್ರೀಕಾಂತ ನಾಯ್ಕ, ಶ್ರೀನಿವಾಸ ಕಲಾ ಮಿತ್ರ ಮಂಡಳಿಯ ಅಧ್ಯಕ್ಷ ಶ್ರೀಧರ ನಾಯ್ಕ, ಬ್ರಹ್ಮಶ್ರೀ ನಾರಾಯಣ ಗುರು ಧರ್ಮಪರಿಪಾಲನ ಸಂಘದ ಅಧ್ಯಕ್ಷ ಮನಮೋಹನ ನಾಯ್ಕ, ಊರಿನ ಗಣ್ಯರಾದ ಗಣಪತಿ ನಾಯ್ಕ, ಶ್ರೀಮತಿ ಸುಮಿತ್ರಾ ಪೂಜಾರಿ, ಶ್ರೀಮತಿ ಪೂರ್ಣಿಮಾ ನಾಯ್ಕ, ವೇದಿಕೆಯಲ್ಲಿ ಇದ್ದರು. ಯುವಕ ಸಂಘದ ಸದಸ್ಯರಾದ ರಾಜು ನಾಯ್ಕ, ಪಾಂಡುರಂಗ ನಾಯ್ಕ, ಅಣ್ಣಪ್ಪ ನಾಯ್ಕ, ಜಗದೀಶ ನಾಯ್ಕ, ಶ್ರೀನಿವಾಸ ನಾಯ್ಕ, ವೆಂಕಟೇಶ ನಾಯ್ಕ, ವಸಂತ ನಾಯ್ಕ, ಗಣೇಶ ನಾಯ್ಕ, ಸಹಕರಿಸಿದರು.
ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಶ್ರೀನಿವಾಸ ಕಲಾ ಮಿತ್ರ ಮಂಡಳಿ ಹಾಗೂ ವೆಂಕಟೇಶ್ವರ ಯುವಕ ಸಂಘದ ಸಹಯೋಗದಲ್ಲಿ ಮಜಾಭಾರತ ಖ್ಯಾತಿಯ ಉಡುಪಿಯ ಅಭಿನಯ ಕಲಾ ತಂಡದಿಂದ ದೇಶ ಪ್ರೇಮ ಮೆರೆಯುವ ” ಬಂದೇ ಬರ್ತಾನೆ ” ಎಂಬ ನಾಟಕ ಪ್ರದರ್ಶನ ನಡೆಯಿತು.