ಭಟ್ಕಳ: ಇಲ್ಲಿನ ಆಸರಕೇರಿಯ ಶ್ರೀನಿವಾಸ ಕಲಾ ಮಿತ್ರ ಮಂಡಳಿಯ ವತಿಯಿಂದ ನಾಟಕ ಕಲಾವಿದರಾದ ಹನುಮಾನ ನಗರದ ವೆಂಕಟೇಶ ನಾಯ್ಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರದ ಆಸರಕೇರಿಯ ವೆಂಕಟೇಶ್ವರ ದೇವಸ್ಥಾನದ ವರ್ಧಂತಿ ಉತ್ಸವದ ಅಂಗವಾಗಿ ಹಮ್ಮಕೊಂಡ ಸಾಂಸ್ಕ್ರತಿಕ ಕಾರ್ಯಕ್ರಮ ವೇದಿಕೆಯಲ್ಲಿ ಹಲವು ವರ್ಷಗಳಿಂದ ಹಾಸ್ಯ ಕಲಾವಿದರಾಗಿ ನಾಟಕದಲ್ಲಿ ಪಾತ್ರ ವಹಿಸುತ್ತಿದ್ದ ವೆಂಕಟೇಶ ನಾಯ್ಕರಿಗೆ ಶಾಲು ಹೊದೆಯಿಸಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀನಿವಾಸ ಕಲಾಮಿತ್ರ ಮಂಡಳಿಯ ಅಧ್ಯಕ್ಷ ಶ್ರೀಧರ ನಾಯ್ಕ ,ಸದಸ್ಯರಾದ ಕೆ.ಆರ್.ನಾಯ್ಕ, ವೆಂಕಟೇಶ ನಾಯ್ಕ ತಲಗೋಡು, ಶ್ರೀನಿವಾಸ ನಾಯ್ಕ ಸರ್ಪನಕಟ್ಟೆ, ಪಾಂಡು ನಾಯ್ಕ ಕವೂರು ಇದ್ದರು.