ಶಿರಸಿ: ಸೂರ್ಯನಾರಾಯಣ ಪ್ರೌಢಶಾಲೆ ಬಿಸಲಕೊಪ್ಪದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಇವರ ಅನುದಾನ ದಲ್ಲಿ ನಿರ್ಮಿಸಿದ ಬಾಲಕರ ನೂತನ ಶೌಚಾಲಯವನ್ನು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಪಿ.ಬಸವರಾಜ ಉದ್ಘಾಟಿಸಿ ರಿಬ್ಬನ್ ಕತ್ತರಿಸುವ ಮೂಲಕ ನೆರವೇರಿಸಿದರು.
ನಂತರ ಮಾತನಾಡಿದ ಅವರು ಮೂಲಭೂತ ಸೌಕರ್ಯದ ಭಾಗವಾಗಿ ಹಾಗೂ ಗಾಂಧೀಜಿ ಅವರ ಸ್ವಚ್ಛತೆ ಕನಸು ಸಾಕಾರಗೊಳ್ಳಲು ಇದು ಸಹಕಾರಿ. ಉತ್ತಮ, ವಿಶಾಲ ಪರಿಸರ ದಲ್ಲಿ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅವಕಾಶ ಮಾಡಿ ಕೊಡುವ ದ ರೊಂದಿಗೆ ಸಂಸ್ಥೆ ಉತ್ತಮ ಸೌಲಭ್ಯ ಗಳನ್ನು ಒದಗಿಸಿದೆ, ಕಾರಣ ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣ ಹೊಂದಬೇಕು, ಶಿಕ್ಷಕರು ಅದಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದರು.ಸೂರ್ಯನಾರಾಯಣ ಪ್ರೌಢ ಶಾಲೆ ಕೀರ್ತಿ ಹೆಚ್ಚಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ರಾದ ಎಸ್. ಎಮ್. ಹೆಗಡೆ ಮಾತನಾಡಿ ಪಡೆದ ಸೌಲಭ್ಯಗಳನ್ನು ಉತ್ತಮವಾಗಿ ನಿರ್ವಹಿಸುವ ಹಾಗೂ ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರೂ ಹೊಂದಬೇಕು ಎಂದರು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗಣೇಶ ಭಟ್ ವಾನಳ್ಳಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಅನುದಾನ ನೀಡಿದ ಹೊರಟ್ಟಿ ಯವರಿಗೆ ಕೃತಜ್ಞತೆ ಸಲ್ಲಿಸಿದರು.
ಉಪಾಧ್ಯಕ್ಷ ಶ್ರೀಧರ ನಾಯಕ ಮತ್ತು ಕಾರ್ಯದರ್ಶಿಗಳಾದ ಜಿ.ವಿ.ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ಲೋಕನಾಥ್ ಹರಿಕಂತ್ರ ನಿರ್ವಹಿಸಿದರು. ಶಿಕ್ಷಕಿ ಸವಿತಾ ಭಟ್ ವಂದಿಸಿದರು. ಸಂಸ್ಥೆಯ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.