ಕಾರವಾರ: ರೋಟರಿ ಕ್ಲಬ್ ಕಾರವಾರ ಪಶ್ಚಿಮ ಹಾಗೂ ಸೀ-ಸೈಡ್ ವತಿಯಿಂದ ಇನ್ಪೋಸಿಸ್ ಮತ್ತು ಕರ್ನಾಟಕ ಸರಕಾರದ ಸಹಕಾರದೊಂದಿಗೆ ಇಲ್ಲಿನ ಸರಕಾರಿ ಪೋಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳ ಪ್ರಗತಿಗಾಗಿ 215 ಗಣಕಯಂತ್ರಗಳನ್ನು ದೇಣಿಗೆಯಾಗಿ ನೀಡಲಾಯಿತು.
ರೋಟರಿ ಜಿಲ್ಲೆ 3170 ಪ್ರಾಂತಪಾಲ ರೋಟರಿಯನ್ ಗೌರಿಶ್ ದೊಂಡ ಕಾಲೇಜಿಗೆ ಗಣಕಯಂತ್ರಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಾರವಾರ ನಗರಸಭೆಯ ಅಧ್ಯಕ್ಷ, ರೋಟರಿ ಪಶ್ಚಿಮ ಸದಸ್ಯ ರೋಟರಿಯನ್ ಡಾ.ನಿತಿನ್ ಪಿಕಳೆ ಉಪಸ್ಥಿತರಿದ್ದು, ರೋಟರಿಯ ಕಾರ್ಯ ಪ್ರಶಂಸಿಸಿದರು. ರೋಟರಿಯನ್ ನರೇಂದ್ರ ಬರವಾಲ್ ಯೋಜನೆಯ ಮಾಹಿತಿ ನೀಡಿದರು.
ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಡಿ.ಕೆ.ಗೌಡ ರೋಟರಿಯ ದೇಣಿಗೆ ಪ್ರಶಂಸಿಸುತ್ತ ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ನಾಂದಿಯಾಗಲಿದೆ ಹಾಗೂ ಪ್ರಗತಿಗೆ ಶಕ್ತಿ ನೀಡಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ರೋಟರಿಯನ್ ರಾಜು ಪಾಟೀಲ್ ಮಾತನಾಡಿ, ಕ್ಲಬ್‍ಗೆ ನೀಡಿದ ಅವಕಾಶಕ್ಕಾಗಿ ಗವರ್ನರ್ ರೋಟರಿಯನ್ ಗೌರಿಶ ದೊಂಡರಿಗೆ ಅಭಿನಂದನೆ ಸಲ್ಲಿಸಿದರು.
ರೋಟರಿ ಪಶ್ಚಿಮದ ಅಧ್ಯಕ್ಷ ರೋಟರಿಯನ್ ಪ್ರಜ್ಞಾ ಪಾಟೀಲ್ ಅನುಪಸ್ಥಿತಿಯಲ್ಲಿ ಐಪಿಪಿ ರೋಟರಿಯನ್ ಶಿವಾನಂದ ನಾಯ್ಕ ಉಪಸ್ಥಿತರಿದ್ದರು.
ರೋಟರಿಯನ್ ಅಶೋಕ ಪಾಟೀಲ್ ಡಿಸಿಸಿ, ರೋಟರಿ ಕ್ಲಬ್ ಕಾರವಾರ ಪಶ್ಚಿಮ ಹಾಗೂ ರೋಟರಿ ಕ್ಲಬ್ ಕಾರವಾರ ಸೀ ಸೈಡ್ ಇದರ ಪದಾಧಿಕಾರಿಗಳು ಹಾಗೂ ಸದಸ್ಯರು, ಪಾಲಿಟೆಕ್ನಿಕ್ ವಿದ್ಯಾರ್ಥಿ ಮತ್ತು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪಶ್ಚಿಮಕ್ಕೆ ಅಂಕುರ ಡಿಸೋಜಾ, ಜಸ್ಟಿನ್ ಫನಾರ್ಂಡಿಸ್ ರೋಟರಿ ಸದಸ್ಯರಾಗಿ ಸೇರ್ಪಡೆಗೊಂಡರು. ಗೌರಿಶ್ ದೊಂಡ ರೋಟರಿಯನ್ ಸೇರ್ಪಡೆ ಮಾಡಿಕೊಂಡರು.
ರೋಟರಿಯನ್ ಕೊಮೊಡೊರ್ ಎ.ಆರ್.ಬಿ ಡಿಸೋಜಾ ಕಾರ್ಯಕ್ರಮ ನಡೆಸಿಕೊಟ್ಟರು. ರೋಟರಿಯನ್ ಜೀತೆಂದ್ರ ಸ್ವಾಗತಿಸಿದರು. ರೋಟರಿ ಪಶ್ಚಿಮ ಹಾಗೂ ರೋಟರಿ ಸೀ ಸೈಡ್‍ನ ಅಧ್ಯಕ್ಷರು ಕಾರ್ಯಕ್ರಮ ನಿರ್ವಹಿಸಿದರು. ರೋಟರಿ ಸೀ ಸೈಡ್‍ನ ಅಧ್ಯಕ್ಷ ರೋಟರಿಯನ್ ದೀಪಾ ಪೈ ವಂದಿಸಿದರು.