ಶಿರಸಿ: ಶೈಕ್ಷಣಿಕ ಮೀಸಲಾತಿ ಪಡೆದುಕೊಂಡಿರುವ ಕುಂಬ್ರಿ ಮರಾಠಿ ಜಾತಿಯು ರಾಜಕೀಯ ಮೀಸಲಾತಿಗೆ ಅರ್ಹವಾಗಿದ್ದು ತಕ್ಷಣ ಸಂಬಂಧಿಸಿದ ಇಲಾಖೆಗೆ ಕುಂಬ್ರಿ ಮರಾಠಿ ಜಾತಿಯನ್ನು ರಾಜಕೀಯ ಮೀಸಲಾತಿ ನೀಡಲು ಶೀಫಾರಸ್ಸು ಮಾಡಲಾಗುವುದೆಂದು ರಾಜ್ಯ ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿ ಮುದ್ಗಾನ್ ಅವರ ಉಪಸ್ಥಿತಿಯಲ್ಲಿ ಆಯೋಗದ ಸದಸ್ಯರಾದ ಬಿ. ಎಸ್ ರಾಜಶೇಖರ್, ಹೆಚ್.ಎಸ್ ಕಲ್ಯಾಣ ಕುಮಾರ, ಶಾರದಾ ನಾಯ್ಕ, ಅರುಣ ಕುಮಾರ, ಕೆ ತಿಮ್ಮಪ್ಪ ಸುವರ್ಣ, ಹಾಗೂ – ಮೆಂಬರ್ ಅವರ ಉಪಸ್ಥಿತಿಯಲ್ಲಿ ಮೇಲಿನಂತೆ ತೀರ್ಮಾನ ತೆಗೆದುಕೊಂಡರು.
ಕುಂಬ್ರಿ ಮರಾಠಿ ಕಳೇದ ೨೦ ವರ್ಷದಿಂದ ಶೈಕ್ಷಣಿಕ ಮೀಸಲಾತಿ ಪಡೆದುಕೊಳ್ಳುತ್ತಿದ್ದರು ರಾಜಕೀಯ ಮೀಸಲಾತಿಯಿಂದ ವಂಚಿತರಾಗಿರುವ ಹಿನ್ನೆಲೆಯಲ್ಲಿ ಆಯೋಗಕ್ಕೆ ಸಾಮಾಜಿಕ ಚಿಂತಕ ರವೀಂದ್ರ ನಾಯ್ಕ ಹಾಗೂ ಜಿಲ್ಲಾ ಕುಂಬ್ರಿ ಮರಾಠಿ ಸಂಘದ ಅಧ್ಯಕ್ಷ ಮಂಜುನಾಥ ಮರಾಠಿ ಬೆಂಗಳೂರಿನಲ್ಲಿ ನಿಯೋಗಕ್ಕೆ ಮನವಿ ಅರ್ಪಿಸಿದ ಹಿನ್ನೆಲೆಯಲ್ಲಿ ಇಂದು ಆಯೋಗವು ಶಿರಸಿಗೆ ಆಗಮಿಸಿ, ದಾಖಲೆ ಪರೀಶಿಲನೆ ಜೊತೆಯಲ್ಲಿ ರಾಜಕೀಯ ಮೀಸಲಾತಿ ಕೋಡಲು ತೀರ್ಮಾನ ತೆಗೆದುಕೊಂಡಿತು.
ನಿಯೋಗದಲ್ಲಿ ಜಿಲ್ಲಾಧ್ಯಕ್ಷರು ಉತ್ತರ ಕನ್ನಡ ಜಿಲ್ಲಾ ಹಿಂದುಳಿದ ಕುಂಬ್ರಿ ಮರಾಠಿ ಅಭಿವೃದ್ಧಿ ಸಂಘದ ಮಂಜುನಾಥ ತಿಮ್ಮ ಮರಾಠಿ, ಶಿರಸಿ ಗೌರವಾಧ್ಯಕ್ಷ ದೇವರಾಜ ಮರಾಠಿ , ಕುಮಟ ಅಧ್ಯಕ್ಷ ಮಂಜುನಾಥ ಮರಾಠಿ , ಯಾಣ ಉಪಾಧ್ಯಕ್ಷ ವೆಂಕಟರಮಣ ಮರಾಠಿ , ಭಟ್ಕಳದ ತಾಲೂಕಾಧ್ಯಕ್ಷ ರುಕ್ಮಾ ಮರಾಠಿ , ಜಿಲ್ಲಾ ಸಮಿತಿ ಸದಸ್ಯ ಕಿರಣ ಎಸ್ ಮರಾಠಿ , ಜಿಲ್ಲಾ ಸಮಿತಿ ಸದಸ್ಯಕೃಷ್ಣ ಮರಾಠಿ , ಭಟ್ಕಳ ಜಿಲ್ಲಾ ಸಮಿತಿ ಸದಸ್ಯ ಗಣಪತಿ, ಗ್ರಾಮ ಸಮಿತಿ ಸದಸ್ಯ ಲಿಂಗು ಎಸ್ ಮರಾಠಿ , ಅಧ್ಯಕ್ಷರು ಕುಮಟ ಪುರುಷೋತ್ತಮ ಮರಾಠಿ , ಅಧ್ಯಕ್ಷರು ಅಂಕೋಲಾ ದಾಮೋದರ ಮರಾಠಿ ಬ್ರಮ್ಮೂರ್ , ಕುಮಟ ಉಪಾಧ್ಯಕ್ಷ ಈಶ್ವರ ಮರಾಠಿ ಯಲವಳ್ಳಿ ಇತರರಿದ್ದರು.