ಹಳಿಯಾಳ: ಚಾಕುವಿನಿಂದ ಇರಿದು ಪತ್ನಿಯನ್ನು ಕೊಲೆ ಮಾಡಿದ ಘಟನೆ ತಾಲೂಕಿನ ಯಡೋಗಾ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಅರ್ಪಣಾ ರಾಜಕುಮಾರ ಕುಂದೇಕರ (22) ಕೊಲೆಯಾದ ಗೃಹಿಣಿ. ಪತಿ ರಾಜಕುಮಾರ ಕುಂದೇಕರ ಆರೋಪಿಯಾಗಿದೆ.
ಆರೋಪಿ ಅರ್ಪಣಾಳನ್ನು 5 ವರ್ಷಗಳ ಹಿಂದೆ ಮದುವೆಯಾಗಿದ್ದ. ಇವರಿಗೆ 3 ವರ್ಷದ ಗಂಡು ಹಾಗೂ 8 ತಿಂಗಳ ಹೆಣ್ಣು ಮಗುವಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೊಲೆ ಮಾಡಿದ ಆರೋಪಿ ಹಳಿಯಾಳ ಪೊಲೀಸ್ ಠಾಣೆಗೆ ಬಂದು ರಾಜಕುಮಾರ ಶರಣಾಗಿದ್ದಾನೆ.
ಸಿಪಿಐ ರಂಗನಾಥ ನೀಲಮ್ಮನವರ, ಪಿಎಸ್‌ಐ ಶಿವಾನಂದ ನಾವದಗಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.