• Slide
    Slide
    Slide
    previous arrow
    next arrow
  • ಅರಣ್ಯ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆ;ಸೂಕ್ತ ತನಿಖೆಗೆ ಒಂದು ತಿಂಗಳ ಗಡವು

    300x250 AD

    ಜೋಯಿಡ: ಅರಣ್ಯ ಇಲಖೆಯು ಜೋಯಿಡಾ ತಾಲೂಕಿನಾದ್ಯಂತ ಸುಮಾರು ಐದು ಸಾವಿರಕ್ಕಿಂತ ಮಿಕ್ಕಿ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಗಿಡ-ಮರ ಕಡಿದು ಕೋಟ್ಯಾಂತರ ರೂಪಾಯಿ ಮೌಲ್ಯ ನಾಶಕ್ಕೆ ಕಾರಣವಾಗಿರುವ ಘಟನೆ ಮತ್ತು ನಿರಂತರ ಅರಣ್ಯವಾಸಿಗಳ ಮೇಲೆ ಜರಗುತ್ತಿರುವ ದೌರ್ಜನ್ಯದ ಸಮಗ್ರ ತನಿಖೆಗೆ ಒಂದು ತಿಂಗಳಿನಲ್ಲಿ ಜರುಗಿಸಬೇಕೆಂದು ಅರಣ್ಯವಾಸಿಗಳು ಬೃಹತ್ ರ‍್ಯಾಲಿ, ಧರಣಿ ಮತ್ತು ಪ್ರತಿಭಟನೆ ಮೂಲಕ ಸರಕಾರಕ್ಕೆ ಅಗ್ರಹಿಸಿದರು.

      ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಇಂದು ಜೋಯಿಡಾ ತಾಲೂಕಿನಲ್ಲಿ ತಹಶೀಲ್ದಾರರ ಕಛೇರಿಯಲ್ಲಿ ಅರಣ್ಯ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಧರಣಿ ಕಾರ್ಯಕ್ರಮ ಜರುಗಿದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿಯವರು ಕಾರವಾರ ಎ.ಸಿ ಮೂಲಕ ಮುಂದಿನ ಒಂದು ತಿಂಗಳಿನಲ್ಲಿ ಅರಣ್ಯವಾಸಿಗಳ ಮೇಲಾಗುವ ದೌರ್ಜನ್ಯ ಹಾಗೂ ಐದು ಸಾವಿರಕ್ಕಿಂತ ಹೆಚ್ಚು ಮರ ಕಡಿದ ಕುರಿತು ಸಮಗ್ರ ತನಿಖೆ ಜರುಗಿಸಲಾಗುವುದೆಂದು ಆಶ್ವಾಸನೆ ನೀಡಿದ ಹಿನ್ನೆಲೆಯಲ್ಲಿ ಧರಣಿ ಕಾರ್ಯಕ್ರಮ ಹಿಂದಕ್ಕೆ ಪಡೆಯಲಾಯಿತು.

      ಅರಣ್ಯವಾಸಿಗಳು ಕಾಡಿನ ಕಿರು ಉತ್ಪನ್ನ ಅನುಭವಿಸುವ ಹಕ್ಕಿಗೆ ಒತ್ತಾಯಿಸಿ ಅರಣ್ಯವಾಸಿಗಳ ಮೇಲೆ ಕಿರುಕುಳ, ದೌರ್ಜನ್ಯ ನೀಡುವುದು, ಒತ್ತಾಯ ಪೂರ್ವಕವಾಗಿ ಹುಲಿ ಯೋಜನೆ ಪ್ಯಾಕೇಜಿನ ಮೂಲಕ ಸ್ಥಳೀಯರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿರುವುದು, ಪ್ರತೀ ಸೋಮವಾರ ಅರಣ್ಯ ಅತೀಕ್ರಮಣದಾರರನ್ನ ಒಕ್ಕಲೆಬ್ಬಿಸಬೇಕೆಂಬ ಸರಕಾರದ ಆದೇಶ ಹಾಗೂ ಕಾನೂನು ಬಾಹಿರವಾಗಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಕ್ರಮಗಳ ವಿರುದ್ಧ ಅರುಣ ಗಣೇಶಗುಡಿ, ಸುಭಾಷ್ ಗಾವಡಾ, ಪ್ರಭಾಕರ ವೇಳಿಪ್, ಅರುಣ ಕಾಂಬ್ರೆಕರ್, ಬುದೋ ಕಾವೇಕರ, ದೇವಿದಾಸ ದೇಸಾಯಿ, ಸುಭಾಷ್ ವೇಳಿಪ ಅವರು ಆಕ್ರೋಶಭರಿತವಾಗಿ ಅರಣ್ಯಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿರುವುದು ಪ್ರತಿಭಟನೆಯ ವಿಶೇಷವಾಗಿತ್ತು.

     ಜೋಯಿಡಾ ತಹಶೀಲ್ದಾರ್ ಸಂಧ್ಯಾ ಕಾಂಬಳೆ, ಅರಣ್ಯಾಧಿಕಾರಿಗಳಾದ ಸಿ.ಟಿ ನಾಯ್ಕ ಆರ್.ಎಫ್.ಓ ಜೋಯಿಡಾ, ಶಿವಾನಂದ ಗೌಡ ಪಾಟೀಲ್ ಆರ್.ಎಫ್.ಓ ಕುಂಭಾರವಾಡ  ಅವರು ಉಪಸ್ಥಿತರಿದ್ದರು.

      ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಸುಭಾಷ್ ಗಾವಡಾ, ಪ್ರಭಾಕರ ವೇಳಿಪ್, ಅರುಣ ಕಾಂಬ್ರೆಕರ್ ಗ್ರಾಮ ಪಂಚಾಯತ ಅಧ್ಯಕ್ಷ ಜೋಯಿಡಾ, ಮಾಬ್ಲು ಕುಂದಲಕರ, ಬುದೋ ಕಾವೇಕರ, ದೇವಿದಾಸ ದೇಸಾಯಿ, ಅರುಣ ಗಣೇಶಗುಡಿ ಗ್ರಾಮ ಪಂಚಾಯತ ಸದಸ್ಯರು ಜೋಯಿಡಾ, ಸುಭಾಷ್ ವೇಳಿಪ, ಅಪ್ಪಾ ಗಾಂವಕರ ಪ್ರಧಾನಿ ಮುಂತಾದವರು ಭಾಗವಹಿಸಿದ್ದರು.

    300x250 AD

    ಮಾದೇವ ವೇಳಿಪ:
       ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ  ದಿ. ಮಾದೇವ ವೇಳಿಪ ಅವರಿಗೆ ಮೌನಾಚಾರಣೆ ಮಾಡಿ, ಘೋಷಣೆ ಇಲ್ಲದೇ, ಮೌನ ಮೆರವಣಿಗೆ ಮೂಲಕ ಮೃತರ ಆತ್ಮಕ್ಕೆ ಶೃದ್ಧಾಂಜಲಿ ಸಲ್ಲಿಸಲಾಯಿತು.

    ಅರಣ್ಯಾಧಿಕಾರಿ ಜೋತೆ ಚಕಮಕಿ:

    ಸಮರ್ಪಕ ಉತ್ತರ ನೀಡಲು ವಿಫಲವಾದ ಅರಣ್ಯಾಧಿಕಾರಿಗಳೊಂದಿಗೆ ಹೋರಾಟಗಾರರ ನಡುವೆ ಮಾತಿನ ಚಕಮಕಿ ಜರುಗಿ, ಅರಣ್ಯಾಧಿಕಾರಿಗಳ ಕರ್ತವ್ಯ ಚ್ಯುತಿ ಕುರಿತು ತೀವ್ರ ವಾಗ್ವಾದ ಜರುಗಿ, ತಹಶೀಲ್ದಾರ್ ಸಂಧ್ಯಾ ಕಾಂಬಳೆ ಅವರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top