ಕಾರವಾರ: ಆರೋಪಿಯು ಫಿರ್ಯಾದಿಯ ಸ್ವಂತ ತಮ್ಮನಾಗಿದ್ದು, ಜಮೀನಿನ ವಿಷಯವಾಗಿ ತಕರಾರು ನಡೆದಿದ್ದು,ಆರೋಪಿತನು ಅದೇ ಸಿಟ್ಟಿನಿಂದ ಆತನ ಮಗನನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಕಾರವಾರದಲ್ಲಿ ನಡೆದಿದೆ.
ತಮ್ಮನು ಪ್ರತ್ಯೇಕ ಮನೆಯಲ್ಲಿ ವಾಸ ಮಾಡಿಕೊಂಡಿದ್ದು, ನೆರೆ ಹಾವಳಿಯಿಂದ ಮನೆಯ ಪರಿಹಾರವನ್ನು ಪಡೆಯುವ ಉದ್ದೇಶದಿಂದ ಕಳೆದ 10 ದಿವಸಗಳ ಹಿಂದೆ ತನ್ನ ವಾಸ್ತವ್ಯದ ಮನೆಯನ್ನು ಮುರಿದುಕೊಂಡು ಹೊಸದಾಗಿ ಮನೆಯನ್ನು ಕಟ್ಟಲು ಪರಿಹಾರಕ್ಕೆ ಅರ್ಜಿ ಸಲ್ಲಿಸಿದಾಗ, ಅರ್ಜಿಗೆ ಫಿರ್ಯಾದಿಯವರು ಪಿತ್ರಾರ್ಜಿತ ಜಮೀನಿಗೆ ಕೋರ್ಟಿನಲ್ಲಿ ತಕರಾರು ಇದ್ದ ಬಗ್ಗೆ ತಕರಾರು ಮಾಡಿದ್ದನೆಂಬ ವಿಷಯಕ್ಕೆ ಫಿರ್ಯಾದಿಯವರೊಂದಿಗೆ ಸಿಟ್ಟಿನಿಂದ ಇದ್ದವನು. ಅದೇ ಸಿಟ್ಟಿನಿಂದ ಬುಧವಾರ ಮಧ್ಯಾಹ್ನ 12:45 ರ ಸುಮಾರಿಗೆ ಆತನ ಮಗನೊಬ್ಬನೇ ಮನೆಯಲ್ಲಿ ಟಿ.ವಿ. ನೋಡುತ್ತಾ ಕುಳಿತಿದ್ದ ಸಂದರ್ಭ ಕೊಲೆ ಮಾಡುವ ಉದ್ದೇಶದಿಂದ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಹಿಂಬದಿಯಿಂದ ಕುತ್ತಿಗೆಯ ಹಿಂಭಾಗಕ್ಕೆ ಕತ್ತಿಯಿಂದ ಗಾಯಪಡಿಸಿದ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಕಲಂ: 448 ರ ಅಡಿಯಲ್ಲಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.