ಯಲ್ಲಾಪುರ: ಯುವತಿಯೋರ್ವಳು ಮನೆಯಿಂದ ಎಲ್ಲಿಯೋ ಹೋದವಳು ಮರಳಿ ಮನೆಗೆ ಬಾರದೆ ಕಾಣೆಯಾದ ಘಟನೆ ತೇಲಂಗಾರ ಗ್ರಾಮ ಜನತಾಕಾಲೋನಿಯಲ್ಲಿ ನಡೆದಿದೆ.
ಜನತಾಕಾಲನಿಯ ಸಂತೋಷ ನಾಯ್ಕರವರ ಮಗಳಾದ ಸ್ವಾತಿ (19) ಈಕೆ ಮನೆ ಕೆಲಸ ಮಾಡಿ ಕೊಂಡಿದ್ದವಳು ಮಂಗಳವಾರದಂದು 08-30 ರ ಸುಮಾರಿಗೆ ಇದ್ದಕ್ಕಿದ್ದಂತೆ ಮನೆಯಿಂದ ಕಾಣೆಯಾಗಿರುವ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.