ಯಲ್ಲಾಪುರ: ಆಟೋ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಆಟೋ ಚಾಲಕ ಹಾಗೂ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಮಂಗಳವಾರ ನಡೆದಿದೆ.
ಮಂಗಳವಾರ 7:10ರ ಸುಮಾರಿಗೆ ಬೈಕ್ ಸವಾರ ಮುಂಡಗೋಡ್ ನಿಂದ ಯಲ್ಲಾಪುರದ ಕಡೆಗೆ ಅತಿವೇಗವಾಗಿ ನಿಷ್ಕಾಳಜಿಯಿಂದ ಬೈಕ್ ಚಲಾಯಿಸಿಕೊಂಡು ಬಂದು ಅದೇ ವೇಳೆ ಯಲ್ಲಾಪುರದಿಂದ ಮುಂಡಗೋಡ್ ಕಡೆಗೆ ಸೈಡಿನಲ್ಲಿ ಬರುತ್ತಿದ್ದ ಆಟೋ ಗೆ ಡಿಕ್ಕಿ ಹೊಡೆದಿದ್ದು, ಇಬ್ಬರು ಸವಾರರಿಗೂ ಕೈ ಕಾಲಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.