ಸಿದ್ದಾಪುರ: ಖ್ಯಾತ ಕನ್ನಡ ಚಲನಚಿತ್ರ ನಿರ್ದೇಶಕ ಹೇಮಂತ ಹೆಗಡೆಯವರು ತಮ್ಮ ಕುಲದೇವರಾದ ತ್ಯಾಗಲಿಯ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿದರು.
ಸಿರಸಿಯ ಸುತ್ತ ಮುತ್ತ ಶೂಟಿಂಗ್ ನಡೆಸುತ್ತಿರುವ ತಮ್ಮ ಹೊಸ ಚಲನಚಿತ್ರ ” ನಮ್ಮನಾಣಿಯ ಮದುವೆ ಪ್ರಸಂಗ “ದ ಯಶಸ್ವಿಗಾಗಿ, ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಮೋಕ್ತೇಸರರಾದ ಗಣಪತಿ ಹೆಗಡೆ ಬೂರನ, ಹಾಗೂ ಊರಿನ ಪ್ರಮುಖರಾದ ನಾಗಪತಿ ಹೆಗಡೆ ಬುಳ್ಳಿ,
ವಿ ಎಂ ಹೆಗಡೆ, ಹಾಗೂ ಲಕ್ಷ್ಮೀಶ ಹೆಗಡೆ ಉಪಸ್ಥಿತರಿದ್ದು,ಅರ್ಚಕರಾದ ಪರಮೇಶ್ವರ ಭಟ್ಟ ಪೂಜೆ ನೆರವೇರಿಸಿ, ಶುಭ ಹಾರೈಸಿದರು.