ಅಂಕೋಲಾ: ಪ್ರತಿಯೊಬ್ಬ ವ್ಯಕ್ತಿಯಲ್ಲಿ ಪರಿಪೂರ್ಣತೆ ಬರುವದು ಅವನ ವೃತ್ತಿಯಲ್ಲಿ ಸಂತೃಪ್ತಿ ಪಡೆದುಕೊಂಡಾಗ ಮಾತ್ರ. ಆದ್ದರಿಂದ ವೃತ್ತಿಯಲ್ಲಿಯೇ ಶ್ರೇಷ್ಠ ವೃತಿಯಾದ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡಿರುವ ಎಲ್ಲರೂ ಕೇವಲ ಪಾಠಬೋಧಿಸುವದಲ್ಲದೇ ಸಮಾಜಕ್ಕೆ ಉಪಯುಕ್ತವಾಗುವ ಕೆಲಸ ಮಾಡುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿಬೇಕು ಎಂದು ಜಿ.ಸಿ. ಕಾಲೇಜ್ ಪ್ರಾಚಾರ್ಯರಾದ ಡಾ. ಅಶೋಕ ಕುಮಾರ ಬಿ. ಹೇಳಿದರು.
ಅವರು ಸ್ಥಳೀಯ ಕೆ.ಎಲ್.ಇ. ಸಂಸ್ಥೆ ಶಿಕ್ಷಣ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪ್ರೇಮಗಿರಿ ಹಸ್ತ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡುತ್ತ ಶಿಕ್ಷಕರು ವಿದ್ಯಾರ್ಥಿಗಳ ಎದುರಿಗೆ ಮಾದರಿಯಾಗಿ ನಿಲ್ಲಬೇಕು. ಶಿಕ್ಷಕರು ತಯಾರಿ ಇಲ್ಲದೇ ಪಾಠ ಮಾಡಬಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕಾರ್ಯದರ್ಶಿಗಳಾದ ಡಾ. ಡಿ. ಎಲ್. ಭಟ್ಕಳ ಅವರು ಶಿಕ್ಷಕರು ಶಿಸ್ತಿನಿಂದ ನಿಯತ್ತಿನಿಂದ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೇ ವಿನ: ಸಂಬಳಕ್ಕಾಗಿ ಕೆಲಸ ಮಾಡಬಾರದು. ಮಕ್ಕಳಲ್ಲಿ ಪ್ರಶ್ನಿಸುವಂತೆ ಪ್ರೇರೆಪಿಸಬೇಕು ಅಲ್ಲದೇ ಎಳೆಯ ಮಕ್ಕಳನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಬದಲಾವಣೆ ಮಾಡಬೇಕು ಎಂದರು.
ಪೂರ್ವಿ ಹಲ್ಗೇಕರ ಅವರಿಗೆ ಆದರ್ಶ ವಿದ್ಯಾರ್ಥಿ ಗೌರವ ನೀಡಿ ಸನ್ಮಾನಿಸಲಾಯಿತು.
ಈ ವರ್ಷದ ಚಾಂಪಿಯನ ತಂಡವಾಗಿ ಬಿಫಿನ್ ರಾವತ್ ತಂಡ ಪ್ರಶಸ್ತಿ ಪಡೆಯಿತು.
ಗ್ಲೋರಿಯಾ ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ವಿನಾಯಕ ಜಿ. ಹೆಗಡೆ ಸ್ವಾಗತಿಸಿದರು. ಉಪನ್ಯಾಸಕಿ ಪ್ರವೀಣಾ ನಾಯಕ ಪರಿಚಯಿಸಿದರು. ಉಪನ್ಯಾಸಕ ಮಂಜುನಾಥ ಇಟಗಿ ವರದಿ, ಉಪನ್ಯಾಸಕಿ ಅಮ್ರಿನಾಜ್ ಶೇಖ ಪ್ರಶಸ್ತಿ ಪತ್ರ ಹಾಗೂ. ಉಪನ್ಯಾಸಕರಾದ ರಾಘವೇಂದ್ರ ಅಂಕೋಲೆಕರ ಹಾಗೂ ಡಾ. ಪುಷ್ಪಾ ಎ. ನಾಯ್ಕ ಬಹುಮಾನ ವಿಜೇತರ ಯಾದಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಸತೀಶ ದಳವಿ ವಂದಿಸಿದರು, ವೈಶಾಲಿ ಗುನಗಿ ನಿರೂಪಿಸಿದರು.