ಭಟ್ಕಳ: ಇಲ್ಲಿನ ಡಿ.ಪಿ.ಕಾಲೋನಿ ಕಂಡೆಕೊಡ್ಲು ನಲ್ಲಿ ನಿರ್ಮಾಣ ಹಂತದ ನೀರಿನ ದೊಡ್ಡ ಪ್ರಮಾಣದ ಟ್ಯಾಂಕಿನೊಳಗೆ ಹೊರಿಯೊಂದು ಬಿದ್ದು ಪರದಾಡಿದ ಸಮಯದಲ್ಲಿ ಸಾರ್ವಜನಿಕರು ರಕ್ಷಣೆ ಮಾಡುವಂತೆ ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿದಾಗ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಹೊರಿಯನ್ನು ಮೇಲಕ್ಕೆ ತೆಗೆದು ರಕ್ಷಿಸಿದರು.
ಘಟನಾ ಸ್ಥಳದಲ್ಲಿ ಕಾರ್ಯ ನಿರ್ವಹಿದ ಠಾಣಾಧಿಕಾರಿ ರಮೇಶ ಶೆಟ್ಟಿ ಮಾರುತಿ ನಾಯ್ಕ, ನಾರಾಯಣ ಪಟಗಾರ, ಸಚಿನ ರಾಠೋಡ, ಚೇತನ ಪಾಟೀಲ, ಶಂಕರ ಲಮಾಣಿ, ಮಂಜುನಾಥ ಶೆಟ್ಟಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.