ಅಂಕೋಲಾ : ಸಂಗಾತಿ ರಂಗಭೂಮಿ ಅಂಕೋಲಾ, ಬೇಲೆಕೇರಿ ಮೀನುಗಾರರ ಯೂನಿಯನ್, ಮೀನುಗಾರರ ಸಹಕಾರಿ ಸಂಘ ಹಾಗೂ ಸ್ಥಳೀಯ ಸಾರ್ವಜನಿಕ ಪ್ರಮುಖರ ಸಹಯೋಗದಲ್ಲಿ ಫೆಬ್ರುವರಿ 12 13 ಮತ್ತು 14 ರಂದು ಮೂರು ದಿನಗಳ ಕಾಲ ರಾಜ್ಯಮಟ್ಟದ ವಿಚಾರ ಮಂಥನ ಮತ್ತು ನಾಯಕತ್ವ ಶಿಬಿರವನ್ನು ಬೆಲೇಕೇರಿಯ ದತ್ತಗುರು ಕಲ್ಯಾಣಮಂಟಪದಲ್ಲಿ ಆಯೋಜಿಸಲಾಗಿದೆ.
ಪಟ್ಟಣದ ಖಾಸಗಿ ಹೊಟೇಲಿನಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಂಗಾತಿ ರಂಗಭೂಮಿಯ ತಿಮ್ಮಣ್ಣ ಭಟ್ ಮಾಹಿತಿ ನೀಡಿ ಈ ಶಿಬಿರದಲ್ಲಿ ರಾಜ್ಯದ 25 ಜಿಲ್ಲೆಗಳಿಂದ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು, ವಿದ್ಯಾರ್ಥಿಗಳು, ಯುವಜನರು ಪತ್ರಕರ್ತರು, ರಂಗಕರ್ಮಿಗಳು ಪರಿಸರ ಕಾರ್ಯಕರ್ತರು, ಹಾಗೂ ವಿವಿಧ ಚಳುವಳಿ ನಾಯಕರು ಸೇರಿದಂತೆ ರಾಜ್ಯದ ಆಯ್ದ ಶಿಬಿರಾರ್ಥಿಗಳು ಭಾಗವಹಿಸಲಿದ್ದಾರೆ.
ಈ ಶಿಬಿರವು ಪ್ರತಿದಿನ ಮುಂಜಾನೆ 9 ಗಂಟೆಯಿಂದ ಸಂಜೆ 7 ಗಂಟೆ ತನಕ ನಡೆಯಲಿದೆ. ಫೆಬ್ರುವರಿ 12ರಂದು 11ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯಾಗಲಿದ್ದು, ಫೆಬ್ರವರಿ 13 ರಂದು ಸಂಜೆ 6 ಗಂಟೆಗೆ ಸಾರ್ವಜನಿಕ ಕಾರ್ಯಕ್ರಮ ಮತ್ತು ಕಲಾತಂಡದಿಂದ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ಶಿಬಿರದಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಸಮುದಾಯಕ್ಕೆ ಸಂಬಂಧಿಸಿದ ಜ್ವಲಂತ ಆಗುಹೋಗುಗಳ ಬಗ್ಗೆ ಚರ್ಚೆ ನಡಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಸುಭಾಷ ನಾಯಕ ಭಾವಿಕೇರಿ, ಸಂತೋಷ ಗೌಡ, ವಿನಾಯಕ ಶೆಟ್ಟಿ, ಹಾಗೂ ಕೇ.ರಮೇಶ ಇದ್ದರು.