• Slide
    Slide
    Slide
    previous arrow
    next arrow
  • ಹೊಸ ಡ್ರೋನ್ ಕರಡು ನಿಯಮ ಪ್ರಕಟಿಸಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ

    300x250 AD

    ನವದೆಹಲಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಹೊಸ ಡ್ರೋನ್ ಕರಡು ನಿಯಮಗಳನ್ನು ಪ್ರಕಟಿಸಿದೆ.

    ಕಳೆದ ಮಾರ್ಚ್ ತಿಂಗಳಲ್ಲಿ ಪ್ರಕಟಿಸಲಾಗಿದ್ದ ಮಾನವ ರಹಿತ ವೈಮಾನಿಕ ವ್ಯವಸ್ಥೆ ನಿಯಮಗಳ ಬದಲಾಗಿ ಸದ್ಯ ಹೊಸದಾಗಿ ಪ್ರಕಟಿಸಲಾದ ಕರಡು ನಿಯಮಗಳು ಜಾರಿಗೆ ಬರಲಿವೆ. ಈ ಕರಡು ನಿಯಮಗಳನ್ನು ಪರಿಶೀಲಿಸಿ ಸಾರ್ವಜನಿಕರು ತಮ್ಮ ಪ್ರತಿಕ್ರಿಯೆಗಳನ್ನು ತಿಳಿಸಲು ಅವಕಾಶ ಇರುವುದಾಗಿಯೂ ಸಚಿವಾಲಯ ಹೇಳಿದೆ.

    ಹೊಸ ನಿಯಮಗಳನ್ವಯ ವಿಶಿಷ್ಟ ಅನುಮತಿ ಸಂಖ್ಯೆ, ವಿಶಿಷ್ಟ ಫೆÇೀಟೋ ಟೈಪ್ ಗುರುತಿನ ಸಂಖ್ಯೆ, ದೃಢೀಕರಣ ಪ್ರಮಾಣಪತ್ರ, ಆಮದು ಮಾಡಿಕೊಳ್ಳಲಾದ ಡ್ರೋನ್ ಆಗಿದ್ದಲ್ಲಿ ಅದಕ್ಕೆ ಸಂಬಂಧಿಸಿದಂತೆ ದಾಖಲೆಗಳು, ಕಾರ್ಯಾಚರಣೆಗೆ.ಅನುಮೋದನೆ, ವಿದ್ಯಾರ್ಥಿಗಳಿಗೆ ರಿಮೋಟ್ ಪೈಲಟ್ ಲೈಸನ್ಸ್ ನೀಡುವುದು ಸೇರಿದಂತೆ ಹಲವು ನಿಯಮಗಳು ಮುಂದಿನ ದಿನಗಳಲ್ಲಿ ಅಸ್ಥಿತ್ವದಲ್ಲಿರುವುದಿಲ್ಲ ಎಂದು ಸಚಿವಾಲಯ ಹೇಳಿದೆ.

    300x250 AD

    ಬದಲಾಗಿ ವಾಯುಸ್ಥಳದ ನಿರ್ವಹಣೆಗೆ ಒತ್ತು ನೀಡಲಾಗುತ್ತದೆ. ಅದರಂತೆ ಭಾರತದ ವಾಯುಗಡಿಯೊಳಗೆ ಕೆಂಪು, ಹಳದಿ ಮತ್ತು ಹಸಿರು ವಲಯಗಳನ್ನು ವಿಂಗಡಿಸಲಾಗುತ್ತದೆ. ಡಿಜಿಟಲ್ ಸ್ಕೈ ರೂಪದಲ್ಲಿ ಇದನ್ನು ಮುಕ್ತವಾಗಿ ಪ್ರದರ್ಶಿಸಲಾಗುತ್ತದೆ. ನಾಗರಿಕ ವಿಮಾನಯಾನ ಮಹಾನಿರ್ದೇಶಕರು ನಿರ್ವಹಿಸುವ ಡಿಜಿಟಲ್ ಸ್ಕೈ ಫ್ಲ್ಯಾಟ್ ಫಾರ್ಮ್‍ನಲ್ಲಿ ಡ್ರೋಣ್ ಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ತಿಳಿಯಬಹುದಾಗಿದೆ.
    ನ್ಯೂಸ್ 13

    Share This
    300x250 AD
    300x250 AD
    300x250 AD
    Leaderboard Ad
    Back to top