ಭಟ್ಕಳ: ನಗರದ ಆಸರಕೇರಿಯ ನಾಮಧಾರಿ ಸಮಾಜದ ಗುರುಮಠದ ಪಾಲಕಿ ಉತ್ಸವದ ಮೆರವಣಿಗೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ಕೋಟಾ ಪೂಜಾರಿ ಪಾಲ್ಗೊಂಡು ದೇವರ ದರ್ಶನ ಪಡೆದರು.
ಕಾರವಾರದಿಂದ ಆಗಮಿಸಿದ ಸಚಿವರು ರಾತ್ರಿ 8 ಗಂಟೆಗೆ ನಗರದ ಚಿನ್ನಪಟ್ಟಣ ಹನುಮಂತ ದೇವಸ್ತಾನದ ಆವರಣದಲ್ಲಿದ್ದ ಗುರುಮಠದ ಪಾಲಕಿ ಉತ್ಸವದ ಮೆರವಣಗೆಗೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಸಚಿವರ ಕರಿಕಲ್ ನಲ್ಲಿರುವ ದ್ಯಾನ ಮಂದಿರಕ್ಕೆ ಭೇಟಿ ನೀಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವರತಿ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ, ಬಿ.ಜೆ.ಪಿ. ಪಕ್ಷದ ಪ್ರಮುಖರಾದ ರವಿ ನಾಯ್ಕ ಜಾಲಿ, ತಾಲೂಕಾ ಬಿಜೆಪಿ.ಅದ್ಯಕ್ಷ ಸುಬ್ರಾಯ ದೇವಾಡಿಗ, ರಾಜೇಶ ನಾಯ್ಕ, ಗುರುಮಠ ದೇವಸ್ತಾನದ ಆಡಳಿತ ಮಂಡಳಿ ಅಧ್ಯಕ್ಷ ಕೃಷ್ಣ ನಾಯ್ಕ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.