ಕಾರವಾರ: ಯೋಗ ಮಾಡುವುದರಿಂದ ರೋಗದಿಂದ ದೂರ ಇರಲು ಸಾಧ್ಯ ಎಂದು ವೈದ್ಯ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಹೇಳಿದರು.
ರಥ ಸಪ್ತಮಿಯ ಅಂಗವಾಗಿ ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್ ನಿಂದ ನಗರದ ಟ್ಯಾಗೋರ್ ಕಡಲ ತೀರದಲ್ಲಿ ಸೋಮವಾರ ಆಯೋಜಿಸಿದ್ದ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೋಗ ಬಂದ ನಂತರ ನಾವು ವೈದ್ಯರು ಔಷಧ ನೀಡುತ್ತೇವೆ. ಆದರೆ, ಯೋಗ ರೋಗ ಬರದಂತೆ ತಡೆಯುತ್ತದೆ. ನಿಯಮಿತ ಹಾಗೂ ವ್ಯವಸ್ಥಿತ ಜೀವನ ಶೈಲಿ, ಯೋಗ ಮಾಡುವುದರಿಂದ ನಿರೋಗಿಯಾಗಿರಬಹುದು ಎಂದರು.
ನಗರಸಭೆ ಸ್ಥಾಯಿ ಸಮಿತಿ ಚೇರ್ಮನ್ ಸಂಧ್ಯಾ ಬಾಡಕರ್, ಬಿಜೆಪಿ ಮಹಿಳಾ ಮೋರ್ಚಾದ ನಯನಾ ನೀಲಾವರ, ಪತಂಜಲಿ ಯೋಗ ಸಮಿತಿಯ ಶ್ರೀನಾಥ ಜಿ.ಹಾಗೂ ಯಮುನಾ ಶೇಟ್ ವೇದಿಕೆಯಲ್ಲಿದ್ದರು. ಸುರೇಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಯೋಗ ಗುರು ಪ್ರಶಾಂತ ರೇವಣಕರ್ ಅವರ ಮಾರ್ಗದರ್ಶನದಲ್ಲಿ 100 ಕ್ಕೂ ಹೆಚ್ಚು ಜನರು 108 ಬಾರಿ ಸೂರ್ಯ ನಮಸ್ಕಾರ ಮಾಡಿದರು.