ಶಿರಸಿ: ಲಯನ್ಸ ಕ್ಲಬ್ ಶಿರಸಿ ,ಲಿಯೋಕ್ಲಬ್ ಹಾಗೂ ಸ್ಕೌಟ್ ಹಾಗೂ ಗೈಡ್ ಸಂಯುಕ್ತ ಆಶ್ರಯದಲ್ಲಿ ಲಯನ್ಸ ಶಾಲೆಯಲ್ಲಿ ಶಿರಸಿಯ ಟಿ.ಎಸ್.ಎಸ್. ಆಸ್ಪತ್ರೆಯ ಸಹಯೋಗದಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶಿರಸಿಯ ಟಿ.ಎಸ್.ಎಸ್ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಶಿವಕುಮಾರ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಿ ಮಕ್ಕಳಲ್ಲಿ ಪೌಷ್ಟಿಕಾಂಶದ ಲಭ್ಯತೆ, ಹಲ್ಲು, ಕಣ್ಣು, ಕಿವಿಯ ಜೊತೆ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸುವುದೂ ಅಗತ್ಯವಾಗಿದೆ ಎಂದರು.
ಶಾಲೆಯ ಮುಖ್ಯಾಧ್ಯಾಪಕರಾದ ಶಶಾಂಕ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿದರು. ಟಿ.ಎಸ್.ಎಸ್. ಆಸ್ಪತ್ರೆಯ ಪ್ರಚಾರಾಧಿಕಾರಿ ಗಣೇಶ ಉಪಸ್ಥಿತರಿದ್ದರು. ಎಲ್ಲಾ ವಿದ್ಯಾರ್ಥಿಗಳ ತಪಾಸಣಾ ವರದಿ ದಾಖಲಿಸಿ ಹೆಲ್ತ್ ಕಾರ್ಡ ನೀಡಲಾಯಿತು. ಗೈಡ್ ಮಾಸ್ಟರ್ ಚೇತನಾ ಪಾವಸ್ಕರ್ ಕಾರ್ಯಕ್ರಮ ನಿರ್ವಹಿಸಿದರು.