• Slide
    Slide
    Slide
    previous arrow
    next arrow
  • ಫೆ.12ಕ್ಕೆ TSS ನಿಂದ ಚಿಪಗಿಯಲ್ಲಿ ದೋಟಿ ಕೌಶಲ್ಯ ತರಬೇತಿ

    300x250 AD

    ಶಿರಸಿ: ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ ಶಿರಸಿ ವತಿಯಿಂದ ಇಂದಿನ ಅಡಿಕೆ ಕೃಷಿಯಲ್ಲಿನ ಕೊನೆಕೊಯ್ಲು ಮತ್ತು ಮದ್ದು ಸಿಂಪಡಣೆಗೆ ಅಗತ್ಯವಿರುವ ಕುಶಲ ಕಾರ್ಮಿಕರ ಕೊರತೆಯನ್ನು ನಿವಾರಿಸಲು ಒಂದು ದಿನದ “ಅಡಿಕೆ ದೋಟಿ ಕೌಶಲ್ಯ ತರಬೇತಿ”ಯನ್ನು ಫೆ. 12 ರ ಬೆಳಗ್ಗೆ 10:30 ಕ್ಕೆ ಚಿಪಗಿಯ ದತ್ತಾತ್ರೇಯ ಎಮ್. ಜೋಶಿ ಇವರ ತೋಟದಲ್ಲಿ ಆಯೋಜಿಸಲಾಗಿದೆ.

    ಈ ಕಾರ್ಯಕ್ರಮವನ್ನು ಶಿರಸಿ ಟಿ.ಎಸ್.ಎಸ್ ನ ಕಾರ್ಯಾಧ್ಯಕ್ಷರಾದ ರಾಮಕೃಷ್ಣ ಹೆಗಡೆ, ಕಡವೆ ಉದ್ಘಾಟಿಸಲಿದ್ದಾರೆ.
    ಅತಿಥಿಯಾಗಿ ಸಂಪನ್ಮೂಲ ವ್ಯಕ್ತಿಯಾದ ಉಮಾನಂದ ಭಟ್ಟ, ಕೊಡ್ಲಳ್ಳಿ ಆಗಮಿಸಲಿದ್ದು, ಕೃಷಿಕ ದತ್ತಾತ್ರೇಯ ಎಮ್. ಜೋಶಿ ಚಿಪಗಿ ಹಾಗೂ ಶಿರಸಿ ಟಿ.ಎಸ್.ಎಸ್ ನ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top