ಜೋಯಿಡಾ: ಜೋಯಿಡಾದ ತಾಲೂಕಿನಾದ್ಯಂತ ಅರಣ್ಯ ಇಲಾಖೆಯವರು ಐದು ಸಾವಿರಕ್ಕಿಂತ ಮಿಕ್ಕಿ ಗಿಡ-ಮರ ಕಡೆದಿರುವ ಮತ್ತು ನಿರಂತರವಾಗಿ ಅರಣ್ಯವಾಸಿಗಳಿಗೆ ಅರಣ್ಯಾಧಿಕಾರಿಗಳು ಕಿರುಕುಳ, ದೌರ್ಜನ್ಯ, ಮಾನಸಿಕ ಹಿಂಸೆ ಹಿಂಸೆ ನೀಡುತ್ತಿರುವ ಕುರಿತು ಬೃಹತ್ ಪ್ರತಿಭಟನೆ ಮತ್ತು ರ‍್ಯಾಲಿ ಜರುಗಲಿದೆ ಎಂದು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.10 ರಂದು ಗುರುವಾರ, ಮುಂಜಾನೆ 10:30 ಕ್ಕೆ ಜೋಯಿಡಾದ ಕುಣಬಿ ಭವನದ ಸಭಾಂಗಣದಲ್ಲಿ ಪ್ರತಿಭಟನಾ ಸಭೆ ಜರುಗಿಸಿ, ನಂತರ ಜರಗುವ ಪ್ರತಿಭಟನಾ ರ‍್ಯಾಲಿಯಲ್ಲಿ ಹೇಚ್ಚಿನ ಸಂಖ್ಯೆಯಲ್ಲಿ ಅತೀಕ್ರಮಣದಾರರು ಭಾಗವಹಿಸಬೇಕೆಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.