• Slide
  Slide
  Slide
  previous arrow
  next arrow
 • ಕಸಾಪ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿದೆ;ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಪ್ರತಿಕ್ರಿಯೆ

  300x250 AD

  ಕಾರವಾರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ವಿವಿಧ ತಾಲೂಕುಗಳ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಮಂಗಳವಾರ ಬಿಡುಗಡೆಗೊಳಿಸಿದರು.

  ಜಿಲ್ಲಾ ಗೌರವ ಕಾರ್ಯದರ್ಶಿಯಾಗಿ ಪಿ.ಆರ್.ನಾಯ್ಕ, ಜಾರ್ಜ್ ಫನಾರ್ಂಡೀಸ್, ಜಿಲ್ಲಾ ಗೌರವ ಕೋಶಾಧ್ಯಕ್ಷರಾಗಿ ಮುರ್ತುಜಾ ಹುಸೇನ್ ದಾಂಡೇಲಿ ಆಯ್ಕೆಯಾಗಿದ್ದಾರೆ. ಅದರಂತೆ ತಾಲೂಕಾ ಅಧ್ಯಕ್ಷರಾಗಿ ರಾಮಾ ನಾಯ್ಕ (ಕಾರವಾರ), ಗೋಪಾಲ ಕೃಷ್ಣ ನಾಯ್ಕ (ಅಂಕೋಲಾ), ಸುಬ್ಬಯ್ಯ ನಾಯ್ಕ (ಕುಮಟಾ), ಸುಬ್ರಾಯ ಗೌಡ (ಹೊನ್ನಾವರ), ಗಂಗಾಧ ನಾಯ್ಕ (ಭಟ್ಕಳ), ಜಿ. ಸುಬ್ರಾಯ ಭಟ್ (ಶಿರಸಿ), ಗೋಪಾಲ ನಾಯ್ಕ (ಸಿದ್ದಾಪುರ), ಸುಬ್ರಹ್ಮಣ್ಯ ಭಟ್ (ಯಲ್ಲಾಪುರ), ಸಹದೇಶ ನಡಿಗೇರ (ಮುಂಡಗೋಡ), ಸುಮಂಗಲಾ ಅಂಗಡಿ (ಹಳಿಯಾಳ), ನಾರಾಯಣ ನಾಯ್ಕ (ದಾಂಡೇಲಿ) ಹಾಗೂ ಪಾಂಡುರಂಗ ಪಟಗಾರ (ಜೊಯಿಡಾ) ತಾಲೂಕಿಗೆ ಆಯ್ಕೆಯಾಗಿದ್ದಾರೆ.

  ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ಜಿಲ್ಲೆಯಲ್ಲಿ ಕ.ಸಾ.ಪ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ನೂತನ ತಂಡ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂದರು. ಜಿಲ್ಲೆಯ ಕೆಲವು ಬ್ಯಾಂಕುಗಳಲ್ಲಿ ಅದರಲ್ಲೂ ವಿಶೇಷವಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡ ಬಾರದ ಉದ್ಯೋಗಿಗಳೇ ಹೆಚ್ಚಾಗಿದ್ದು, ಇದರಿಂದ ಬ್ಯಾಂಕಿನ ಗ್ರಾಹಕರು ಹಾಗೂ ಅಧಿಕಾರಿಗಳ ನಡುವೆ ಸಂಹವನದ ಕೊರತೆಯಾಗುತ್ತಿದೆ. ಕೆಲವು ಬ್ಯಾಂಕಿನ ಸಿಬ್ಬಂದಿಗಳು ಹಿಂದಿ, ಇಂಗ್ಲೀಷ್ ಭಾಷೆಯನ್ನು ಬಳಸುವುದರಿಂದ ಬಹುತೇಕ ಗ್ರಾಮೀಣ ಭಾಗದ ಗ್ರಾಹಕರಿಗೆ ಹಾಗೂ ನಗರ ಪ್ರದೇಶದಲ್ಲಿ ಹಿಂದಿ, ಇಂಗ್ಲೀಷ್ ಬಾರದವರಿಗೆ ಸಂಪರ್ಕದ ಸಮಸ್ಯೆಯಾಗುತ್ತಿದೆ ಎಂದರು.

  ಈ ಹಿಂದೆಯೇ ಕನ್ನಡ ಅಭಿವೃದ್ದಿ ಪ್ರಾಧಿಕಾರ ಹೊರ ರಾಜ್ಯದವರು ಕರ್ನಾಟಕದಲ್ಲಿ ಯಾವುದೇ ಇಲಾಖೆ ಹಾಗೂ ಬ್ಯಾಂಕುಗಳಲ್ಲಿ ನೇಮಕಗೊಂಡು ಕೆಲಸ ಮಾಡುವವರು ಆರು ತಿಂಗಳೊಳಗೆ ಕನ್ನಡ ಭಾಷೆ ಓದಲು ಬರೆಯಲು ಕಲಿತುಕೊಳ್ಳತಕ್ಕದ್ದು ಎಂಬ ಆದೇಶ ನೀಡಿತ್ತು. ಸರಕಾರ ಕೂಡಾ ಇದನ್ನು ಸಮ್ಮತಿಸಿದೆ. ಆದರೆ ಬಹುತೇಕ ಉದ್ಯೋಗಿಗಳು ಈ ನಿಯಮ ಪಾಲಿಸುತ್ತಿಲ್ಲ. ಇದು ಬಹಳಷ್ಟು ಸಮಸ್ಯೆಯಾಗುತ್ತಿದೆ. ಸರಕಾರದ ನಿರ್ದೇಶನದಂತೆ ಜಿಲ್ಲೆಯ ಬ್ಯಾಂಕ್ ಹಾಗೂ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಕನ್ನಡ ಬಾರದ ಎಲ್ಲ ಉದ್ಯೋಗಿಗಳಿಗೂ ಆರು ತಿಂಗಳೊಳಗೆ ಕನ್ನಡ ಓದಲು, ಬರೆಯಲು ಕಲಿತುಕೊಳ್ಳಲು ನಿರ್ದೇಶಿಸುವುದು. ಒಂದೊಮ್ಮೆ ಆರು ತಿಂಗಳ ನಂತರವೂ ಇದೇ ಸಮಸ್ಯೆ ಮುಂದುವರೆದರೆ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಸಿ, ಜಿಲ್ಲೆಯ ಹಿರಿ ಕಿರಿಯ ಸಾಹಿತಿಗಳ, ಕನ್ನಡಪರ ಹೋರಾಟಗಾರರ, ಚಿಂತಕರ ಜೊತೆ ಸಮಾಲೋಚಿಸಿ ಮುಂದಿನ ಯೋಜನೆ ರೂಪಿಸಲಾಗುವುದು. ಸಂದರ್ಭ ಬಂದರೆ ಹೋರಾಟವೂ ಅನಿವಾರ್ಯವಾಗಬಹುದು ಎಂದು ಎಚ್ಚರಿಸಿದರು.

  300x250 AD

  ಸರಕಾರ ಈಗಾಗಲೇ ಎಲ್ಲ ಅಂಗಡಿ-ಮಳಿಗೆ ಹಾಗೂ ಸರಕಾರಿ, ಅರೆ ಸರಕಾರಿ, ಖಾಸಗಿ ಕಚೇರಿಗಳ ನಾಮಫಲಕಗಳನ್ನು ಕನ್ನಡಕ್ಕೆ (ಮೇಲ್ಭಾಗದಲ್ಲಿ ಶೇ. 60 ರಷ್ಟು) ಆದ್ಯತೆ ನೀಡಿ ಅಳವಡಿಸುವಂತೆ ಆದೇಶಿಸಿದೆ. ಆದರೆ ಬಹುತೇಕ ಸ್ಥಳಗಳಲ್ಲಿ ಇದನ್ನು ಪಾಲಿಸುತ್ತಿಲ್ಲ. ಜೊತೆಗೆ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ರಸ್ತೆ ಹಾಗೂ ಬೇರೆ ಸ್ಥಳಗಳಲ್ಲಿಯೂ ಬೇರೆ ಭಾಷೆಗಳಿಂದ ನಾಮ ಫಲಕ ಬರೆಯಲಾಗುತ್ತಿದೆ. ಇದು ಕನ್ನಡ ನಾಡಲ್ಲಿ ಕನ್ನಡಕ್ಕೆ ಮಾಡುವ ಅವಮಾನವೇ ಆಗಿದೆ.

  ಹಾಗಾಗಿ ಸರಕಾರವೇ ನಿರ್ದೇಶಿಸಿರುವಂತೆ ಎಲ್ಲ ಸರಕಾರಿ, ಅರೆ ಸರಕಾರಿ, ಖಾಸಗಿ ಕಾರ್ಯಾಲಯ, ಬ್ಯಾಂಕ್, ಶಾಲಾ-ಕಾಲೇಜು, ಹಾಗೂ ವೃತ್ತ, ರಸ್ತೆಗಳು ಮತ್ತು ಮನೆಗಳಿಗೆ ಕಡ್ಡಾಯವಾಗಿ ಆದ್ಯತೆಯ ಮೇರೆಗೆ ಕನ್ನಡ ಭಾಷೆಯಲ್ಲಿಯೇ ನಾಮಫಲಕ ಅಳವಡಿಸುವಂತಾಗಬೇಕು. ಈ ಬಗ್ಗೆ ಜಿಲ್ಲಾಡಳಿತದಿಂದಲೇ ಒಂದು ಸುತ್ತೋಲೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ, ಗ್ರಾಮ ಪಂಚಾಯತಗಳಿಗೆ, ಸರಕಾರಿ ಕಚೇರಿ ಹಾಗೂ ಬ್ಯಾಂಕು ಇತರೆ ಕಚೇರಿಗಳಲ್ಲಿ ಕನ್ನಡದ ಬಳಿಕೆ ಮಾಡಬೇಕು ಎಂದರು.

  ಪತ್ರಿಕಾಗೋಷ್ಠಿಯಲ್ಲಿ ಜಾರ್ಜ್ ಫನಾರ್ಂಡೀಸ್, ರಾಮಾ ನಾಯ್ಕ, ಡಾ. ವೆಂಕಟೇಶ ನಾಯ್ಕ ಸೇರಿದಂತೆ ಇನ್ನಿತರರು ಇದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top