ದಾಂಡೇಲಿ: ಮನೆಯ ಹತ್ತಿರದ ಕಾಳಿನದಿಯ ದಂಡೆಯ ಬಳಿ ಕೈಕಾಲು ತೊಳೆಯುವ ಸಲುವಾಗಿ ಫೆ. 7 ರಂದು ಹೋಗಿದ್ದ ವ್ಯಕ್ತಿಯು ಮರುದಿನ ನೀರಿನಲ್ಲಿ ಮೊಸಳೆ ದಾಳಿಯಿಂದಾಗಿ ಮೃತಪಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
23 ವರ್ಷದ ಅರ್ಷದ್ ಖಾನ್ ಎಂಬಾತ ಫ್ಯಾಬ್ರಿಕೇಶನ್ ಕೆಲಸ ಮಾಡುತ್ತಿದ್ದು, ದಾಂಡೇಲಿಯ ಪಟೇಲ್ ನಗರದ ನಿವಾಸಿಯಾಗಿದ್ದ ಈತ ಸೋಮವಾರದಂದು ಮನೆಯ ಹತ್ತಿರದಲ್ಲಿರುವ ಕಾಳಿ ನದಿಯ ಸಮೀಪ ಕೈ ಕಾಲು ತೊಳೆಯಲು ಹೋಗಿದ್ದು, ಮರುದಿನ 4:30 ರ ಸುಮಾರಿಗೆ ದಾಂಡೇಲಿಯ ಕಂಪನಿಯ ಹಿಂಭಾಗ ಇರುವ ಕಾಳಿ ನದಿಯ ದಂಡೆಯ ಪಕ್ಕದಿಂದ ಹಾಯ್ದಿರುವ ನೀರಿನಲ್ಲಿ ಮೊಸಳೆ ದಾಳಿಯಿಂದಾಗಿ ಮೃತಪಟ್ಟ ಸ್ಥಿತಿಯಲ್ಲಿ ಶವ ಸಿಕ್ಕಿದ್ದು ಈ ಘಟನೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳುವಂತೆ ಸಿ.ಆರ್.ಪಿ.ಸಿ ಕಲಂ 174 ರ ಅಡಿಯಲ್ಲಿ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.