• Slide
    Slide
    Slide
    previous arrow
    next arrow
  • ಕಾರವಾರದಲ್ಲಿ ಕೋವಿಡ್ ಲಸಿಕಾ ಜಾಗೃತಿ ಅಭಿಯಾನ

    300x250 AD

    ಕಾರವಾರ: ಚೈಲ್ಡ್ ಫಂಡ್ ಇಂಡಿಯಾ ಹಾಗು ಟಿಕ್ನಿಕಲರ್ ಸಹಯೋಗದಲ್ಲಿ ತಾಲೂಕಿನಾದ್ಯಂತ ಕೋವಿಡ್ ಲಸಿಕಾ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

    ತಾಲೂಕು ಆರೋಗ್ಯಾಧಿಕಾರಿ ಸೂರಜ ನಾಯ್ಕ ಲಸಿಕಾ ಗಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ, ಈ ಅಭಿಯಾನವು ಹಳ್ಳಿ ಮಟ್ಟದ ಜನರಲ್ಲಿ ಜಾಗೃತಿ ಮೂಡಿಸಲು ತುಂಬ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಈ ಅಭಿಯಾನವು ಧ್ವನಿವರ್ದಕ ವಾಹನದ ಮೂಲಕ ಶಿರವಾಡ, ಕಡವಾಡ, ಮಾಜಾಳಿ, ಚಿತ್ತಾಕುಲ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಹಾಗೂ ನಗರಸಭೆಯ ೧೫ ಕ್ಕೂ ಅಧಿಕ ವಾರ್ಡ್ಗಳಲ್ಲಿ ಸಂಚರಿಸಿ, ಜಾಗೃತಿ ಮೂಡಿಸಿತು.

    300x250 AD

    ಈ ಸಂದರ್ಭದಲ್ಲಿ ಬೈತಖೊಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶಬುಪಾ ಸೈಯದ್, ಸಮುದಾಯ ಆರೋಗ್ಯಾಧಿಕಾರಿಗಳು, ಎಎನ್‌ಎಮ್ ಹಾಗೂ ಚೈಲ್ಡ್ಫಂಡ್ ಸಿಬ್ಬಂದಿ ವರ್ಗದವರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top