ಕುಮಟಾ:ಇಬ್ಬರು ಚಲಿಸುತ್ತಿದ್ದ ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು ಹಿಂಬದಿ ಸವಾರನೂ ಗಾಯಗೊಂಡ ಘಟನೆ ಸೋಮವಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಮಣಕಿ ಬಳಿ ನಡೆದಿದೆ. ಬೈಕ್ ಸವಾರ ಬ್ರಹ್ಮಾನಂದ ಈತನಿಗೆ ಕೈ ಕಾಲಿನ ಹೆಬ್ಬೆರಳಿನ ಮೂಳೆ ಮುರಿದಿದ್ದು ಗಂಭೀರ ಗಾಯಗಳಾಗಿವೆ.
ಬೈಕ್ ಸವಾರ ಆತನ ಸ್ನೇಹಿತನೊಂದಿಗೆ ಕುಮಟಾ ಅಂಕೋಲಾ ಮಾರ್ಗವಾಗಿ ಹೊರಟು ಸುಮಾರು 12 ಗಂಟೆಯ ಹೊತ್ತಿಗೆ ರಾಷ್ಟ್ರೀಯ ಹೆದ್ದಾರಿ 66ರ ಮಣಕಿ ಹತ್ತಿರ ಸಮೀಪಿಸುವಾಗ ಅಂಕೋಲ ಕಡೆಯಿಂದ ಕುಮಟಾ ಕಡೆಗೆ ಹೊರಟ ವಿ ಆರ್ ಎಲ್ ಲಾಜಿಸ್ಟಿಕ್ ಲಾರಿಯ ( ka 25 /b 4834 ) ಸವಾರ ಅತಿವೇಗವಾಗಿ ಲಾರಿ ಚಲಾಯಿಸಿಕೊಂಡು ಬಂದು ನಿಷ್ಕಾಳಜಿಯಿಂದ ರಸ್ತೆಯ ಬಲಕ್ಕೆ ವಾಹನ ಚಲಾಯಿಸಿ ಇಬ್ಬರು ಪ್ರಯಾಣಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಹಿಂಬದಿ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇದಕ್ಕೆ ಆರೋಪಿ ಲಾರಿ ಚಾಲಕ ಕಾರಣ ಎಂದು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರು ದಾಖಲಾಗಿದೆ.