• Slide
    Slide
    Slide
    previous arrow
    next arrow
  • ಎಲ್ಲರೂ ಸುಖದಿಂದಿರಲು ಅಹಂಕಾರ ತೊರೆಯಿರಿ; ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

    300x250 AD

    ಭಟ್ಕಳ: ಇಲ್ಲಿನ ಆಸರಕೇರಿಯಲ್ಲಿರುವ ವರ್ಧಂತಿ ಉತ್ಸವದ ಸಂಧರ್ಭದಲ್ಲಿ ನಾಮಧಾರಿ ಗುರುಮಠದ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ತಾನದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಗುರುಭವನದ ಕಟ್ಟಡವನ್ನು ಶ್ರೀರಾಮ ಕ್ಷೇತ್ರದ ಮಠಾಧೀಶರಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಲೋಕಾರ್ಪಣೆಗೊಳಿಸಿದರು.

    ನಂತರ ಅವರು ವರ್ಧಂತಿ ಉತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ ಜಗತ್ತಿನಲ್ಲಿ ಎಲ್ಲರೂ ಸುಖದಿಂದ ಇರಬೇಕೆಂದು ಆಶಿಸುತ್ತಾನೆ. ನಾವು ಪ್ರತಿದಿನ ಸುಖದಿಂದ ಇರಬೇಕಾದರೆ ಮೊದಲು ನಾವು ನಮ್ಮಲ್ಲಿರುವ ಅಧಿಕಾರ, ಸಂಪತ್ತು, ಅಹಂಕಾರಗಳನ್ನು ಪರಮಾತ್ಮನ ಅಡಿಯಲ್ಲಿ ತೊರೆಯಬೇಕು. ಸತತ ಧ್ಯಾನ ಹಾಗೂ ಭಗವಂತನ ಸೇವೆಯಿಂದ ನಾವು ವೇದ ಜ್ಞಾನವನ್ನು ಪಡೆಯಬೇಕು.

    ಭಗವಂತನದಲ್ಲಿ ಸಾಮ್ರಾಜ್ಯದಲ್ಲಿ ಅಧಿಕಾರ, ಸಂಪತ್ತು ಇದ್ಯಾವುದು ಪ್ರಯೋಜನಕ್ಕೆ ಬರುವುದಿಲ್ಲ. ನಾವು ಭಗವಂತನದಲ್ಲಿ ಅರ್ಪಣೆ ಮಾಡಿಕೊಂಡರೆ ಜ್ಞಾನ ಯೋಗ ಪಡೆಯಬಹುದು ನಮ್ಮಲ್ಲಿರುವ ಜ್ಞಾನದ ಕೊರತೆಯಿಂದ ನಾವು ಬ್ರಾಹ್ಮಣ, ಶೂದ್ರ,ಕ್ಷತ್ರೀಯ ಎಂದು ವಿಂಗಡನೆ ಮಾಡಿಕೊಂಡಿದ್ದೇವೆ. ಯಾರಲ್ಲಿ ಜ್ಞಾನವಿದೆಯೂ ಅವರು ಭಗವಂತನ್ ಇನ್ನೊಂದು ಸ್ವರೂಪ . ವೇದ ಉಪನಿಷತ್ತುನ್ನು ಅಧ್ಯಯನ ಮಾಡಿ ಯಾರು ಜ್ಞಾನವನ್ನು ಪಡೆಯುತ್ತಾರೋ ಅವರೇ ಬ್ರಾಹ್ಮಣ್ಯರಾಗುತ್ತಾರೆ.ಇಲ್ಲಿನ ಜಾತಿ ಮುಖ್ಯವಲ್ಲ, ಎಂದ ಅವರು ಯಾರಲ್ಲಿ ಶೃದ್ದೆ ಇದಯೋ ಅವರಲ್ಲಿ ಜ್ಞಾನ ಸಿಗುತ್ತದೆ. ಎಂದರಲ್ಲದೇ ಸಮಾಜವು ಪಕ್ಷದ ಓಲೈಕೆಯಲ್ಲಿ ತೊಡಗಿಕೊಳ್ಳಬಾರದು ಜನಪರವಾದ ಕೆಲಸ ವನ್ನು ಯಾವ ಸರಕಾರ ಮಾಡಿದರೂ ನಾವು ಅವರನ್ನು ಗೌರವಿಸಬೇಕು.

    ಇಂದು ಹಿಂದೂ ಸಮಾಜವನ್ನು ಮುನ್ನೆಡೆಸಿಕೊಂಡು ಹೋಗುವಲ್ಲಿ ನಾವೆಲ್ಲರೂ ಎಡವಿದ್ದೇವೆ. ಅದರಲ್ಲಿ ಮಠಾಧೀಶರ ಪಾತ್ರವೂ ಇದೆ ಎಂದ ಅವರು ಭಲಿಷ್ಟವಾದ ಸಮಾಜವನ್ನು ಕಟ್ಟಲು ನಾವೆಲ್ಲರೂ ಉತ್ತಮ ಸಂಸ್ಕಾರ ಪಡೆದು ಕಾರ್ಯಪ್ರವೃತ್ತರಾಗಬೇಕು ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸುನೀಲ್ ನಾಯ್ಕ ಮಾತನಾಡಿ ಸಮಾಜ ಬಾಂಧವರು ಅಚ್ಚುಕಟ್ಟಾಗಿ ಪ್ರತಿವರ್ಷ ವರ್ಧಂತಿ ಉತ್ಸವವನ್ನುಯ ಮಾಡಿಕೊಂಡು ಬಂದಿದ್ದಾರೆ.ಸಮಾಜದ ಎಲ್ಲರೂ ಈ ದೇವಸ್ತಾನದ ಕಾರ್ಯಕ್ರಮದಲ್ಲಿ ಒಗ್ಗೂಡಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಇದು ತುಂಬಾ ಸಂತೋಷದ ವಿಚಾರ ಎಂದ ಅವರು ಸಮಾಜದ ಗುರುಭವನಕ್ಕೆ ಸರಕಾರದಿಂದ 30 ಲಕ್ಷ ರೂ ಅನುಧಾನ ಕಲ್ಪಿಸಿಕೊಟ್ಟಿದ್ದು ಇನ್ನು ಮುಂದೆಯೂ ಮುದೆಯೂ ನಾನು ಸರಕಾರದಿಂದ ಈ ದೇವಸ್ತಾನ ಅಬಿವೃದ್ದಿಗೆ ಹಣವನ್ನು ಮಂಜೂರಿ ಮಾಡಿಸಿಕೊಡುತ್ತೇನೆ ಎಂದರರಲ್ಲದೇ ಎಲ್ಲ ದೇವಸ್ಥಾನದಲ್ಲಿ ಸ್ವಾಗತ ಗೋಪುರವಿದ್ದು ಈ ದೇವಸ್ಥಾನಕ್ಕೆ ಸ್ವಾಗತ ಗೋಪುರದ ಕೊತೆಯನ್ನು ನಿವಾರಿಸಲು ನಾನು ನನ್ನ ವಯಕ್ತಿಕ ಖಿರ್ಚಿನಿಂದ ಸ್ವಾಗತ ಗೋಪುರ ಮಾಡಿಕೊಡುತ್ತೇನೆ ಎಂದರು.


    ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವನ್ನು ಸಮಾಜದ ಪರವಾಗಿ ಗೌರವಿಸಲಾಯಿತು. ಪ್ರಾರಂಭದಲ್ಲಿ ಮಂಜುನಾತ ನಾಯ್ಕ ಪ್ರಾರ್ಥನೆ ಹಾಡಿದರು.

    300x250 AD

    ನಿಚ್ಚಲಮಕ್ಕಿ ದೇವಸ್ತಾನದ ಆಡಳಿತ ಮಂಡಳೀಯ ಅಧ್ಯಕ್ಷ ಕೃಷ್ಣ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

    ವೇದಿಕೆಯಲ್ಲಿ ಮಾಜಿ ಶಾಸಕ ಜೆ.ಡಿ.ನಾಯ್ಕ, ದೇವಸ್ಥಾನದ ಗೌರವಾಧ್ಯಕ್ಷರಾದ ಎಂ.ಆರ್. ನಾಯ್ಕ, ಮಾಜಿ ಅದ್ಯಕ್ಷರಾದ ಡಿ.ಬಿ.ನಾಯ್ಕ, ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗಂಗಾಧರ ನಾಯ್ಕ ಹಾಗೂ ನಾರಾಯಣ ನಾಯ್ಕ ನಿರ್ವಹಿಸಿದರು. ಶಾಂತಾರಾಮ ನಾಯ್ಕ ವಂದನಾರ್ಪಣೆ ಮಾಡಿದರು.

    ವರ್ಧಂತಿ ಉತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಹೋಮ ಹವನಗಳೂ ಜರುಗಿತು. ನಂತರ ಮಹಾಪೂಜೆ ನಡೆಯಿತು. ಪ್ರಸಾದ ವಿತರಣೆಯ ನಂತರ ಸಾವಿರಾರು ಭಕ್ತರು ಅನ್ನ ಸಂತರ್ಪಣೆ ಕಾರ್ಯಕ್ರಮಲ್ಲಿ ಪಾಲ್ಗೊಂಡರು. ಸಂಜೆ ಶ್ರೀ ದೇವರ ಫಾಲಕಿ ಮೆರವಣಿಗೆ ನಗರದ ಪ್ರಮುಖ ರಸ್ತೆಗಲ್ಲಿ ಸಂಚರಿಸಿತು.

    ಶಾಸಕ ಸುನೀಲ್ ನಾಯ್ಕ, ದೇವಸ್ತಾನದ ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ ಸಾವಿರಾರು ಭಕ್ತರು ಈ ಪಾಲಕಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top