• Slide
  Slide
  Slide
  previous arrow
  next arrow
 • ಭಕ್ತ ಸಾಗರದಲ್ಲಿ ಇಡಗುಂಜಿ ಗಣಪನ ಮಹಾರಥೋತ್ಸವ ಸಂಪನ್ನ

  300x250 AD

  ಹೊನ್ನಾವರ : ತಾಲೂಕಿನ ಪುರಾಣ ಪ್ರಸಿದ್ದ ಪುಣ್ಯಕ್ಷೇತ್ರ ಇಡಗುಂಜಿಯ ವಿನಾಯಕ ದೇವರ ಮಹಾಸ್ಯಂದನ ಮಹಾರಥೋತ್ಸವ ಭಕ್ತರ ಸಾಗರದ ಸಮ್ಮುಖದಲ್ಲಿ ಸೋಮವಾರ ವಿಜ್ರಂಭಣೆಯಿಂದ ಸಂಪನ್ನವಾಯಿತು.

  ಮಹಾಗಣಪತಿಗೆ ವಿವಿಧ ರೀತಿಯ ಅಭಿಷೇಕ ,ಅರ್ಚನೆ , ಫಲ ಸಮರ್ಪಣೆ, ಹೋಮ ಹವನಾದಿ ಪ್ರಕ್ರಿಯೆಗಳು ನಡೆಯಿತು. ಯತ್ವಿಜರಿಂದ ಚರ್ತುವೇಧ ಪಾರಾಯಣ ನಡೆಯಿತು.ಆಗಮ ತಂತ್ರದ ಪೂಜಾ ಸಂಪ್ರದಾಯದಂತೆ ಪೂಜಾ ಕೈಂಕರ್ಯಗಳು ನಡೆದವು.

  ಪ್ರಧಾನ ಅರ್ಚಕ ಮಂಜುನಾಥ ಶಿವರಾಮ ಭಟ್ಟ ನೇತೃತ್ವದಲ್ಲಿ ಧರ್ಮಕರ್ತರಾಗಿ ವೇ.ಮೂ.ವಿಷ್ಣು ಭಟ್ಟ ಹಾಗೂ ವೇ.ಮೂ ನರಸಿಂಹ ಶಿವರಾಮ ಭಟ್ಟ ತಾಂತ್ರಿಕತನದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಿತು. ಇಡಗುಂಜಿ ವಿನಾಯಕ ದೇವಸ್ಥಾನದ ರಿಸೀವರ್ ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ರಾಜಶೇಖರ ಮಾರ್ಗದರ್ಶನದಲ್ಲಿ ರಥೋತ್ಸವ ಕಾರ್ಯಕ್ರಮ ನಡೆದವು.

  ಅಂದಾಜು ನಲವತ್ತರಿಂದ ನಲವತ್ತೈದು ಕ್ವಿಂಟಾಲ್ ಪಂಚಕಜ್ಜಾಯ ದೇವರಿಗೆ ನೈವೇದ್ಯವಾಗಿದೆ. ಕೋವಿಡ್ ನಿಯಮ ಪಾಲನೆಯ ಜೊತೆಗೆ ಸರತಿ ಸಾಲು, ವಾಹನ ನಿಲುಗಡೆಗೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿತ್ತು. ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ನಡೆಐವ ಬಗ್ಗೆ ಹಾಗೂ ಭಕ್ತಾದಿಗಳಿಗೆ ಸೇವಾ ವಿನಿಯೋಗದ ಅವಕಾಶದ ಬಗ್ಗೆ ಗೊಂದಲವಿದ್ದ ಕಾರಣ ಭಕ್ತರ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿತ್ತು.

  ಜಿಲ್ಲಾಧಿಕಾರಿ ನೇತ್ರತ್ವದಲ್ಲಿ ನಡೆದ ಕೊವೀಡ್ ಮುಂಜಾಗ್ರತಾ ಸಭೆಯಲ್ಲಿನ ಸೂಚನೆಯಂತೆ ದೇವಾಲಯದ ಆಡಳಿತ ಮಂಡಳಿ ಜಾತ್ರಾ ಮಹೋತ್ಸವದ ಬಗ್ಗೆ ವಿಶೇಷ ಪ್ರಚಾರದ ಕಾರ್ಯ ನಡೆಸಿಲ್ಲವಾಗಿತ್ತು. ಇದರ ಮದ್ಯೆಯೂ ರಥಾರೂಢ ಮಹಾಗಣಪತಿಯ ದರ್ಶನ ಪಡೆದು ಪುನೀತರಾಗಲು ಸಾವಿರಾರು ಸಂಖ್ಯೆಯ ಭಕ್ತಸಮೂಹ ಕ್ಷೇತ್ರಕ್ಕೆ ಆಗಮಿಸಿರುವುದು ಕಂಡುಬಂತು.

  ದೇವರಿಗೆ ಹಣ್ಣುಕಾಯಿ,ಫಲ ಸಮರ್ಪಣೆ, ರಥಕಾಣಿಕೆ ಜೊತೆಗೆ ತಾವು ಬೆಳೆದ ಬೆಳೆಗಳಿಗೆ ರೋಗಬಾಧೆ,ಕೀಟ ಭಾದೆ ಆಗಬಾರದೆಂದು ಅಡಿಕೆ ಕೊನೆ,ತೆಂಗಿನ ಫಲ ಸಮರ್ಪಸಿದರು. ರಥದ ಎದುರು ಕಾಯಿ ಒಡೆದು,ರಥಕ್ಕೆ ಬಾಳೆಹಣ್ಣು ಎಸೆದು ದೇವರಿಗೆ ನಮಿಸಿದರು.

  300x250 AD

  ಸಿಂಗಾರ,ಪತಾಕೆಗಳಿಂದ ಶ್ರಂಗರಿಸಿದ ರಥಾರೂಢನಾದ ಮಹಾಗಣಪತಿಯ ರಥ ಎಳೆದು ಕೃತಾರ್ತರಾದರು.
  ದೇವಾಲಯದಲ್ಲಿ ಸ್ವಚ್ಚತೆ, ಭಕ್ತರಿಗೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ವಿಶೇಷ ಕಾಳಜಿ ವಹಿಸಿದ್ದರು. ದೀಪಗಳಿಂದ ಅಲಂಕರಿಸಿದರಿಂದ ಶೋಭೆ ಹೆಚ್ಚಿತ್ತು.

  ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಆಗಮಿಸುವದನ್ನು ಅರಿತು ಮುಂಜಾಗ್ರತವಾಗಿ ದೇವಾಲಯದ ಮಾಲ್ಕಿ ಜಾಗದಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿತ್ತು. ರಥೋತ್ಸವ ಸಮಯದಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಿದ್ದರಿಂದ ಕೆಲಕಾಲ ನೂಕೂ ನೂಗ್ಗಲಾಗುವ ವೇಳೆಗೆ ಭಕ್ತರ ನಿಯಂತ್ರಿಸುವಲ್ಲಿ ಪೆÇಲೀಸ್ ಇಲಾಖೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಿತು.

  ಭಟ್ಕಳ ಉಪವಿಭಾಗಾಧಿಕಾರಿ ಮಮತಾ ದೇವಿ ಜಿ.ಎಸ್ ದಂಪತಿ ಸಮೇತರಾಗಿ ಕ್ಷೇತ್ರಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಕ್ಷೇತ್ರ ನಿಲಗೋಡು ಸನ್ನಿದಾನದ ಮಾದೇವ ಸ್ವಾಮಿಯವರು ಮಹಾರಥೋತ್ಸವದಲ್ಲಿ ಪಾಲ್ಗೊಂಡರು.

  ಪ್ರಧಾನ ಅರ್ಚಕ ವೇ.ಮೂ. ಮಂಜುನಾಥ ಶಿವರಾಮ ಭಟ್ಟ ಮಾದ್ಯಮದವರೊಂದಿಗೆ ಮಾತನಾಡಿ ವಿನಾಯಕ ದೇವರಿಗೆ ಪರಂಪರಾಗತವಾಗಿ ವಷರ್ಂಪ್ರತಿ ನಡೆಸುವ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಜಗತ್ತಿಗೆ ಆವರಿಸಿದ ಮಹಾಮಾರಿ ಕೊರೊನಾ ದೂರವಾಗಿ ಭಕ್ತಗಣ ಸುಖ,ಶಾಂತಿ,ಸಮೃದ್ದಿಯಿಂದ ನೆಲೆಸಲೆಂದು,ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉಂಟಾಗಿರುವ ತೊಡಕುಗಳು ನಿವಾರಣೆಯಾಗಲಿ ಎಂದು ಶ್ರೀ ದೇವರಲ್ಲಿ ಬೇಡಿಕೊಂಡಿರುವುದಾಗಿ ತಿಳಿಸಿದರು.

  ವೇ.ಮೂ.ವಿಷ್ಣು ಭಟ್ಟ ಮಾತನಾಡಿ,ಕಳೆದ ಮೂರು ವರ್ಷಗಳಿಂದ ಕರೋನಾ ಮಾಹಾಮಾರಿಯು ಆರಂಭವಾಗಿಧದು, ಈ ನಡುವೆಯಯ ಬಾಲಗಣಪನ ಉತ್ಸವ ನಿರ್ವಿಘ್ನವಾಗಿ ನೆರವೇರಿದೆ ಎಂದರು.

  Share This
  300x250 AD
  300x250 AD
  300x250 AD
  Leaderboard Ad
  Back to top