ಅಂಕೋಲಾ: ಉತ್ತರ ಕನ್ನಡದಲ್ಲಿ ಮತ್ತೆ ಮಹಿಳೆಯರ ನಾಪತ್ತೆ ಪ್ರಕರಣ ಮುಂದುವರೆದಿದ್ದು, ಸ್ವ ಸಹಾಯ ಸಂಘದ ಸಭೆಗೆ ಹೋಗಿ ಬರುವುದಾಗಿ ತೆರಳಿದ ಮಹಿಳೆಯೋರ್ವಳು ಮನೆಗೆ ಮರಳದೇ ನಾಪತ್ತೆ ಆಗಿರುವ ಘಟನೆ ತಾಲೂಕಿನ ಮಂಜಗುಣಿ ವ್ಯಾಪ್ತಿಯ ಸಿಂಗನಮಕ್ಕಿಯಲ್ಲಿ ನಡೆದಿದೆ.
ಸಿಂಗನಮಕ್ಕಿಯ ವಿವಾಹಿತ ಮಹಿಳೆಯೇ ನಾಪತ್ತೆ ಯಾದವಳಾಗಿದ್ದು, ಇವಳಿಗೆ ಪುಟ್ಟ ಮಗುವೂ ಒಂದಿದೆ ಎನ್ನಲಾಗಿದೆ. ಫೆ. 3 ರಂದು ಧರ್ಮಸ್ಥಳ ಸ್ಪ ಸಹಾಯ ಸಂಘದ ಸಭೆಗೆ ಹೋಗಿ ಬರುವುದಾಗಿ ತೆರಳಿದ ಈಕೆ ಮನೆಗೆ ಮರಳಿ ಬಂದಿಲ್ಲ ಎಂದು ಆಕೆಯ ಸಹೋದರ ಅಂಕೋಲಾ ಠಾಣೆಯಲ್ಲಿ ದೂರು ನೀಡಿ, ತನ್ನ ಸಹೋದರಿಯನ್ನು ಹುಡುಕಿಕೊಡುವಂತೆ ಕೋರಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.