ಶಿರಸಿ: ವಾರ್ಷಿಕ 600 ಕ್ವಿಂಟಲ್ ಗೂ ಅಧಿಕ ಕಾಳುಮೆಣಸು ಬೆಳೆಯುವ ಶಿವಮೊಗ್ಗದ ಜೋಮಿ ಮ್ಯಾಥ್ಯೂಸ್ ರವರು ಕಳೆದ ಅನೇಕ ವರ್ಷಗಳಿಂದ ಅತ್ಯುತ್ತಮ ಗುಣಮಟ್ಟದ ಕಾಳುಮೆಣಸು ಬೆಳೆಯುತ್ತಿದ್ದು, ಪ್ರತಿಷ್ಟಿತ ಅಂತರಾಷ್ಟ್ರೀಯ ಮಟ್ಟದ IPC ಪ್ರಶಸ್ತಿಯನ್ನೂ ಪಡೆದಿದ್ದಾರೆ. ಕೇಂದ್ರ ಸಂಬಾರ ಮಂಡಳಿ ಹಾಗೂ ಮತ್ತಿತರ ಸಂಸ್ಥೆಗಳು ಇವರ ಸಾಧನೆಗೆ ಮನ್ನಣೆ ನೀಡಿವೆ. ಇವರನ್ನು ಕದಂಬ ಮಾರ್ಕೆಟಿಂಗ್ ಮೂಲಕ ಸನ್ಮಾನಿಸಲು ತೀರ್ಮಾನಿಸಿದ್ದು ಇದರ ಅಂಗವಾಗಿ ಫೆ. 11 ರಂದು ಮದ್ಯಾಹ್ನ 3.30 ಕ್ಕೆ ಸಂಸ್ಥೆಯ ಆವಾರದಲ್ಲಿ ಕಾಳುಮೆಣಸು ಬೆಳೆಗಾರರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕದಂಬ ಮಾರ್ಕೆಟಿಂಗ್’ನ ಉಪಾಧ್ಯಕ್ಷರಾದ ಎಂ ವಿ ಭಟ್ಟ ತಟ್ಟೀಕೈ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಖ್ಯಾತ ಕೃಷಿ ವಿಜ್ಞಾನಿಗಳಾದ ಡಾ. ವೇಣುಗೋಪಾಲ ಹಾಗೂ IISR ಅಪ್ಪಂಗಳದ ಮುಖ್ಯಸ್ಥರಾದ ಡಾ. ಎಸ್ ಜೆ ಅಂಕೇಗೌಡರವರು ಆಗಮಿಸಲಿದ್ದಾರೆ. ಆಸಕ್ತ ಕಾಳುಮೆಣಸು ಬೆಳೆಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.