ಕಾರವಾರ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿಗೆ ಸೇರಿದ ನಿರುದ್ಯೋಗಿ ಯುವಕ ಯುವತಿಯರಿಗೆ 2021-22ನೇ ಸಾಲಿನ ವೃತ್ತಿಪರ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಭಾರತ ಸರ್ಕಾರದ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆಯಲ್ಲಿ ಪ್ಲಾಸ್ಟಿಕ್ ತಂತ್ರಜ್ಞಾನದ ಬಗ್ಗೆ 3 ತಿಂಗಳ ವಿವಿಧ ರೀತಿಯ ವೃತ್ತಿಪರ ತರಬೇತಿ ನೀಡಲಾಗುತ್ತಿದ್ದು, ಉಚಿತ ಊಟ ಮತ್ತು ವಸತಿ ಸೌಲಭ್ಯದ ಜೊತೆಗೆ ತಿಂಗಳಿಗೆ ರೂ. 2000 ಶಿಷ್ಯವೇತನ ಇರುತ್ತದೆ. ಮಷೀನ್ ಆಪರೇಟರ್ ಅಸಿಸ್ಟಂಟ್ ಇಂಜೆಕ್ಷನ್ ಮೌಲ್ಡಿಂಗ್ ಮತ್ತು ಮಷೀನ್ ಆಪರೇಟರ್ ಅಸಿಸ್ಟಂಟ್ ಪ್ಲಾಸ್ಟಿಕ್ ಪ್ರೊಸೆಸಿಂಗ್ ತರಬೇತಿ ನೀಡಲಾಗುವುದು.
8ನೇ,10ನೇ ತರಗತಿ, ಪಿಯುಸಿ, ಡಿಗ್ರಿ, ಐಟಿಐ ಆದ 18ರಿಂದ 35 ವರ್ಷದೊಳಗಿನ 2.50 ಲಕ್ಷ ಆದಾಯ ಮಿತಿಯೊಳಗಿನ ಆಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ಆಸಕ್ತ ಅಭ್ಯರ್ಥಿಗಳು ವಿದ್ಯಾರ್ಹತೆ, ಡೇಟ್ ಆಫ್ ಬರ್ತ ಪ್ರೂಪ್, ಗುರುತಿನ ಐಡಿ ಪ್ರೂಪ್ (ಆಧಾರ ಕಾರ್ಡ/ವೋಟರ್ ಐಡಿ/ರೇಶನ್ ಕಾರ್ಡ) ಇತ್ತೀಚಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಎಲ್ಲಾ ಮೂಲ ದಾಖಲೆಗಳು ಮತ್ತು ಒಂದು ಸೆಟ್ ಪ್ರತಿ, 6 ಪಾಸ್ ಪೋರ್ಟ ಅಳತೆಯ ಫೋಟೋಗಳೊಂದಿಗೆ ಫೆ.14 ರೊಳಗಾಗಿ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಭಾರತ ಸರ್ಕಾರ 437/ಎ ಹೆಬ್ಬಾಳ್ ಇಂಡಸ್ಟ್ರಿಯಲ್ ಏರಿಯಾ ಮೈಸೂರು ಇಲ್ಲಿ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೇಲ್ ವಿಳಾಸ sstcmys1@gmail.com ಅಥವಾ ದೂರವಾಣಿ ಸಂಖ್ಯೆ 9380756024, 9066648466, 9845873498, 0821-2510619ಗೆ ಸಂಪರ್ಕಿಸಬಹುದೆಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಲಕ್ಷ್ಮಣ ಬಬಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.