ಕಾರವಾರ : ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‍ಓ) ವತಿಯಿಂದ ಇಪಿಎಸ್ 1995 ಪಿಂಚಣಿದಾರರು ಹಾಗೂ ಚಂದಾದಾರರಿಗೆ ಇಪಿಎಸ್ 1995 ನಿಬಂಧನೆಗಳ ಹಾಗೂ ಕುಂದುಕೊರತೆಗಳನ್ನು ಬಗೆಹರಿಸಲು ಫೆ. 10 ರಂದು ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ.
ಸರ್ಕಾರದ ಮಾರ್ಗಸೂಚಿಯಂತೆ ಜನ ಸಂದಣಿ ತಡೆಯುವ ಉದ್ದೇಶದಿಂದ ಆನ್‍ಲೈನ್ ವೆಬಿನಾರ್‍ನ್ನು ಆಯೋಜಿಸಿದ್ದು ಅಂದು ಮಧ್ಯಾಹ್ನ 3.30 ರಿಂದ ಸಂಜೆ 5 ರವರೆಗೆ ಪಿಂಚಣಿದಾರರು ಪಿಂಚಣಿ ಸಂಬಂಧಿತ ಸಮ್ಯಸೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.
ಆಸ್ತಕರು ಇಪಿಏಫ್‍ಓ ಕಛೇರಿಯ ವಾಟ್ಸ್‍ಪ್ ಸಂಖ್ಯೆ 8762525754 ಮೂಲಕ ಬೆಬಿನಾರ್ ಲಿಂಕನ್ನು ಪಡೆಯಬಹುದು ಹಾಗೂ ಪಿಂಚಣಿದಾರ, ಸದಸ್ಯರು ತಮ್ಮ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಲು ro.hubli@epfindia.gov.in ಇ-ಮೇಲ್ ಮೂಲಕವು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಮಿಹಿರ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.