ಅಂಕೋಲಾ: ಬಿಜೆಪಿ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸಿಗೆ ವರದಾನವಾಗಲಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಈ ಹಿಂದೆ ಎರಡು ಬಣಗಳಿದ್ದವು. ಒಂದು ಬಣ ಶಾಸಕರ ಪರವಾಗಿದ್ದರೆ ಇನ್ನೊಂದು ಶಾಸಕರ ವಿರೋಧಿ ಬಣವಾಗಿತ್ತು. ಇದೀಗ ಜಿಲ್ಲೆಯ ಸಂಸದರ ವಿರೋಧಿ ಬಣವೊಂದು ಕ್ಷೇತ್ರದಲ್ಲಿ ಸದ್ದಿಲ್ಲದೆ ಜನ್ಮತಾಳಿದೆ. ಹಿಂದಿನ ಎರಡು ಬಣಗಳು ಅಂತಿಮವಾಗಿ ಸಂಸದರಿಗೆ ವಿಧೇಯವಾಗಿದ್ದವು. ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಸಂಸದರು ತಮಗೆ ಸಹಕಾರ ನೀಡಿಲ್ಲ ಎಂಬ ಕಾರಣಕ್ಕೆ 2019 ರ ಸಂಸತ್ ಚುನಾವಣೆ ಮೊದಲು ಅಂಕೋಲಾದ ಸಭಾಭವನವೊಂದರಲ್ಲಿ ಸಂಸದರಿಗೆ ಅಗೌರವ ತೋರಿದ ಕೆಲವು ವ್ಯಕ್ತಿಗಳನ್ನು ಇತ್ತೀಚಿಗೆ ವೈಭವೀಕರಿಸಲಾಗುತ್ತಿದೆ. ಈ ರೀತಿಯಾಗಿ ಸಂಸದರಿಗೆ ಪರೋಕ್ಷವಾಗಿ ಟಾಂಗ್ ನೀಡುವ ಮೂಲಕ ಮೂರನೇ ಬಣದ ಉದಯಕ್ಕೆ ಕಾರಣವಾಗಿದೆ ಎಂದರು.
ಬಿಜೆಪಿಯ ಬಣಗಳ ನಡುವಿನ ಒಳಜಗಳದ ಪ್ರಯೋಜನವನ್ನು ಕಾಂಗ್ರೆಸ್ ಕಾರ್ಯಕರ್ತರು ಅರಿತುಕೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ ಪಕ್ಷ ಟಿಕೆಟ್ ನೀಡುವ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಅವರು ತಿಳಿಸಿದರು. ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸಿಗೆ ವರದಾನವಾಗಲಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಈ ಹಿಂದೆ ಎರಡು ಬಣಗಳಿದ್ದವು. ಒಂದು ಬಣ ಶಾಸಕರ ಪರವಾಗಿದ್ದರೆ ಇನ್ನೊಂದು ಶಾಸಕರ ವಿರೋಧಿ ಬಣವಾಗಿತ್ತು. ಇದೀಗ ಜಿಲ್ಲೆಯ ಸಂಸದರ ವಿರೋಧಿ ಬಣವೊಂದು ಕ್ಷೇತ್ರದಲ್ಲಿ ಸದ್ದಿಲ್ಲದೆ ಜನ್ಮತಾಳಿದೆ. ಹಿಂದಿನ ಎರಡು ಬಣಗಳು ಅಂತಿಮವಾಗಿ ಸಂಸದರಿಗೆ ವಿಧೇಯವಾಗಿದ್ದವು. ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಸಂಸದರು ತಮಗೆ ಸಹಕಾರ ನೀಡಿಲ್ಲ ಎಂಬ ಕಾರಣಕ್ಕೆ 2019 ರ ಸಂಸತ್ ಚುನಾವಣೆ ಮೊದಲು ಅಂಕೋಲಾದ ಸಭಾಭವನವೊಂದರಲ್ಲಿ ಸಂಸದರಿಗೆ ಅಗೌರವ ತೋರಿದ ಕೆಲವು ವ್ಯಕ್ತಿಗಳನ್ನು ಇತ್ತೀಚಿಗೆ ವೈಭವೀಕರಿಸಲಾಗುತ್ತಿದೆ. ಈ ರೀತಿಯಾಗಿ ಸಂಸದರಿಗೆ ಪರೋಕ್ಷವಾಗಿ ಟಾಂಗ್ ನೀಡುವ ಮೂಲಕ ಮೂರನೇ ಬಣದ ಉದಯಕ್ಕೆ ಕಾರಣವಾಗಿದೆ ಎಂದರು.
ಬಿಜೆಪಿಯ ಬಣಗಳ ನಡುವಿನ ಒಳಜಗಳದ ಪ್ರಯೋಜನವನ್ನು ಕಾಂಗ್ರೆಸ್ ಕಾರ್ಯಕರ್ತರು ಅರಿತುಕೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ ಪಕ್ಷ ಟಿಕೆಟ್ ನೀಡುವ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಅವರು ತಿಳಿಸಿದರು.