ಅಂಕೋಲಾ : ತಾಲೂಕಿನ ಬೇಲೆಕೇರಿ ಬಳಿಯ ಅರಬೀ ಸಮುದ್ರದ ನುಡುಗಡ್ಡೆಯಲ್ಲಿ ಶ್ರೀ ಕುಕ್ಕಡೇಶ್ವರ ಮತ್ತು ನೇತ್ರಾಣಿ ದೇವಿಯ ಜಾತ್ರಾ ಮಹೋತ್ಸವವು ಕೋವಿಡ ಕಟ್ಟೇಚ್ಚರದಲ್ಲಿ ವಿಜ್ರಂಭಣೆಯಿಂದ ಭಾನುವಾರ ನಡೆಯಿತು.
ಅರಬ್ಬಿ ಸಮುದ್ರದ ನಡುಗಡ್ಡೆಯಲ್ಲಿ ನಡೆಯುವ ಕುಕ್ಕಡೇಶ್ವರ ಮತ್ತು ನೇತ್ರಾಣಿ ದೇವಿ ದೇವಸ್ಥಾನದ ಜಾತ್ರೆಯನ್ನು ಯಶಸ್ವಿಗೊಳಿಸಲು ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ವಹಿಸಿತ್ತು. ತಹಸೀಲ್ದಾರ ಉದಯ ಕುಂಬಾರ ಮತ್ತು ಸಿಪಿಐ ಸಂತೋಷ ಶೆಟ್ಟಿ ಕರಾವಳಿ ಕಾವಲು ಪಡೆ ಸಿಪಿಐ ನಿಶ್ಚಲ್ ಕುಮಾರ ನೇತ್ರತ್ವದಲ್ಲಿ ಅಗ್ನಿ ಶಾಮಕ ದಳ ಮತ್ತು ಆರೋಗ್ಯ ಇಲಾಖೆಯ ರಕ್ಷಣೆಯ ತಂಡಗಳು ಬೇಲೆಕೇರಿ ಮತ್ತು ಕುಕ್ಕುಡೇಶ್ವರ ನಡುಗಡ್ಡೆಯಲ್ಲಿ ಬೀಡು ಬಿಟ್ಟಿತ್ತು.
ಅಂಕೋಲಾದ ಬೇಲೆಕೇರಿ ಬಂದರು ಪ್ರದೇಶದಿಂದ ಕೇವಲ 6 ಪರ್ಶಿಯನ್ ಬೋಟ್ ಮೂಲಕ ಭಕ್ತರನ್ನು ಸಾಗಿಸಲು ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಪೊಲೀಸ ಇಲಾಖೆಯಲ್ಲಿ ನೊಂದಣಿ ಮಾಡಿಸಿಕೊಂಡ ಬೋಟ್ ಮೂಲಕ ಲೈಪ್ ಜಾಕೇಟ್‍ನೊಂದಿಗೆ ಭಕ್ತರನ್ನು ಕುಕ್ಕುಡೇಶ್ವರ ನಡುಗಡ್ಡೆಗೆ ಕರೆದೋಯ್ಯುವ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಜಾತ್ರೆಗೆ ಹೊಗುವ ಮತ್ತು ಬರುವ ಭಕ್ತರ ನೊಂದಣಿ ಮಾಡಿಕೊಳ್ಳಲಾಗುತ್ತಿತ್ತು ಮತ್ತು ಆರೋಗ್ಯ ಇಲಾಖೆ ಅವರ ತಪಾಸಣೆಯು ಮಾಡುತ್ತಿತ್ತು.
ಭಕ್ತರನ್ನು ತುಂಬಿಕೊಂಡು ತೆರಳುವ ಪರ್ಶಿಯನ್ ಜೊತೆಯಲ್ಲಿ ಕರಾವಳಿ ಕಾವಲು ಪಡೆಯ ಗಸ್ತು ಬೋಟ್‍ಗಳಿದ್ದವು. ಈ ವರ್ಷ ಕುಕ್ಕಡೇಶ್ವರ ಜಾತ್ರೆಗೆ ಕೋವಿಡ ಇರುವ ಕಾರಣ ಹೆಚ್ಚಿನ ಭಕ್ತರಿಗೆ ಹೋಗಲು ಅವಕಾಶ ಇಲ್ಲದ ಕಾರಣ ಭಕ್ತರ ಸಂಖ್ಯೆ ಇಳಿಮುಖವಾಗಿತ್ತು. ಜಾತ್ರೆಯು ಇಲಾಖೆಗಳ ಕಣ್ಗಾವಲಿನಲ್ಲಿ ಯಾವುದೆ ಅನಾಹುತಗಳಿಲ್ಲದೆ ಯಶಸ್ವಿಯಾಗಿ ಜರುಗಿತು.