ಭಟ್ಕಳ: ಸಾಧಕರ ಯಶಸ್ಸಿನ ಹಿಂದೆ ನಿರಂತರ ಪಯತ್ನವಿದೆ ಎಂದು ದಿ ನ್ಯೂ ಇಂಗ್ಲೀಷ ಪಿ.ಯು ಕಾಲೇಜಿನ ಪ್ರಾಂಶುಪಾಲ ಡಾ.ವಿರೇಂದ್ರ ಶ್ಯಾನಭಾಗ ಹೇಳಿದರು.
ಅವರು ರಾಷ್ಟ್ರೀಯ ಸೇವಾ ಯೋಜನೆ ಸರಕಾರಿ ಪ್ರೌಢ ಶಾಲೆ ಬೆಳಕೆ ಇವರ ಆಶ್ರಯದಲ್ಲಿ ನಡೆದ “ಪರಿಶ್ರಮವಿಲ್ಲದೆ ಪ್ರಗತಿ ಎಲ್ಲಿದೆ?”ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡಿ, ಕರೋನಾದಿಂದಾಗಿ ಶಿಕ್ಷಣ ವ್ಯವಸ್ಥೆಯು ಕುಸಿದು ಬಿದ್ದಿದ್ದು, ವಿದ್ಯಾರ್ಥಿಗಳು ಬರೆಯುವ, ಓದುವ, ಏಕಾಗ್ರತೆಯಿಂದ ಪಾಠ ಕೇಳುವ ಸಾಮಥ್ರ್ಯವನ್ನು ಕ್ಷೀಣಿಸಿಕೊಂಡಿದ್ದು, ಕೇವಲ ಮೊಬೈಲ್‍ಗೆ ಅವಲಬಿಂತರಾಗಿರುವುದು ಕಂಡು ಬರುತ್ತಿದೆ. ನಿರಂತರ ಪರಿಶ್ರಮದಿಂದ ಮಾತ್ರ ಉತ್ತಮ ಅಂಕಗಳನ್ನು ಪಡೆದು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮವನ್ನು ಉಧ್ಘಾಟಿಸಿದ ಬೆಳಕೆ ಗ್ರಾಮ ಪಂಚಾಯತದ ಅಧ್ಯಕ್ಷರಾದ ಶಾಂತಿ ಜಗದೀಶ ಮೊಗೇರ ಅವರು ಶಾಲೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಇಂದು ಅತ್ಯವಶ್ಯಕವಾಗಿವೆ ಎಂದು ಹೇಳಿದರು.
ಶಾಲೆಯ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಸಹಕರಿಸುತ್ತಿರುವ ಬೆಳಕೆ ಗ್ರಾಮ ಪಂಚಾಯತದ ಸದಸ್ಯರಾದ ಪಾಂಡುರಂಗ ನಾಯ್ಕರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಉತ್ತಮವಾಗಿ ಓದುವುದರ ಜೊತೆಗೆ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗ್ರಾಮ ಪಂಚಾಯತ ಸದಸ್ಯ ಜಗದೀಶ ನಾಯ್ಕ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಹೇಳುತ್ತಾ ಶಾಲೆಗೆ ಅಗತ್ಯವಾಗಿ ಬೇಕಾಗಿರುವ ಇಂಟರನೆಟ್ ಸೌಲಭ್ಯವನ್ನು ತಾವು ಮಾಡಿಸಿಕೊಡುವುದಾಗಿ ಹೇಳಿದರು.
ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಹೊನ್ನಪ್ಪ ನಾಯ್ಕ ಮತ್ತು ಗಜಾನನ ಯುವಕ ಮಂಡಳದ ಅಧ್ಯಕ್ಷರಾದ ಅನಂತ ಮೊಗೇರ ಉಪಸ್ಥಿತರಿದ್ದರು. ಮುಖ್ಯಾದ್ಯಾಪಕಿ ಶಾಲಿನಿ ನಾಯಕ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಪ್ರಕಾಶ ಶಿರಾಲಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. .ಶಿಕ್ಷಕಿ ಭಾರತಿ ಶ್ಯಾನಭಾಗ ನಿರೂಪಿಸಿದರು. ಸಿ.ಎಸ್.ಬೈಲೂರ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.