• Slide
    Slide
    Slide
    previous arrow
    next arrow
  • ಅರಣ್ಯವಾಸಿಗಳ ಮೇಲೆ ದೌರ್ಜನ್ಯ;ಮಾಜಿ ಸಿಎಂ’ಗೆ ದಾಖಲೆಗಳ ಪೂರೈಕೆ- ಕ್ರಮಕ್ಕೆ ಆಗ್ರಹ

    300x250 AD

    ಶಿರಸಿ: ಕಾನೂನು ಬಾಹಿರವಾಗಿ, ಕಾನೂನಿಗೆ ವ್ಯತಿರಿಕ್ತವಾಗಿ ಅರಣ್ಯ ಇಲಾಖೆಯಿಂದ ಅರಣ್ಯವಾಸಿಗಳಿಗೆ ಸಾಗುವಳಿ ಹಕ್ಕಿಗೆ ಆತಂಕ ಉಂಟುಮಾಡುತ್ತಿರುವುದಲ್ಲದೇ ಅರಣ್ಯವಾಸಿಗಳ ಮೇಲೆ ನಿರಂತರ ದೌರ್ಜನ್ಯವೆಸಗುವ ಕ್ರಮದ ಬಗ್ಗೆ ಅರಣ್ಯ ಇಲಾಖೆಯ ಮೇಲೆ ಕ್ರಮ ಜರುಗಿಸುವಂತೆ ಸರಕಾರದ ಗಮನ ಸೆಳೆಯಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಮಾಜಿ ಮುಖ್ಯಮಂತ್ರಿ ಮತ್ತು ಕರ್ನಾಟಕ ವಿಧಾನ ಸಭಾ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರಿಗೆ ಕೋರಿದರು.

      ಅವರು ಇಂದು ಸಿದ್ಧರಾಮಯ್ಯ ಅವರ ಬೆಂಗಳೂರಿನ ಗೃಹ ಕಛೇರಿಯಲ್ಲಿ ಭೇಟಿಯಾಗಿ ಅರಣ್ಯ ಇಲಾಖೆಯಿಂದ ಅರಣ್ಯವಾಸಿಗಳ ಮೇಲೆ ಜರಗುತ್ತಿರುವ ದೌರ್ಜನ್ಯ, ಕಿರುಕುಳ, ಮಾನಸಿಕ ಹಿಂಸೆಯ ಕುರಿತು ದಾಖಲೆಗಳೊಂದಿಗೆ ಅರಣ್ಯ ಇಲಾಖೆಯ ದೌರ್ಜನ್ಯ ಘಟನೆಗಳನ್ನು ವಿಶ್ಲೇಷಿಸಿದರು.

      ಅರಣ್ಯ ಹಕ್ಕು ಕಾಯಿದೆ ಜಾರಿ ಇರುವಂತಹ ಸಂದರ್ಭದಲ್ಲಿ ಹಾಗೂ ಕೇಂದ್ರ ಸರಕಾರವು ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿಗಳನ್ನು ಪುನರ್ ಪರೀಶಿಲಿಸಲಾಗುವುದೆಂದು ಸುಫ್ರೀಂ ಕೋರ್ಟಿನಲ್ಲಿ ಪ್ರಮಾಣ ಪತ್ರ ಸಲ್ಲಿಸಿದಾಗಲೂ ಅರಣ್ಯ ಇಲಾಖೆಯ ಅಧಿಕಾರಿಗಳು ಸರಕಾರದ ನೀತಿ-ನಿಯಮಕ್ಕೆ ವ್ಯತಿರಿಕ್ತವಾಗಿ ಕಾರ್ಯ ಜರುಗಿಸುವುದನ್ನು ವಿರೋಧ ಪಕ್ಷದ ನಾಯಕರ ಗಮನಕ್ಕೆ ತರಲಾಯಿತೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD

    ರಾಜ್ಯದಲ್ಲಿ ಶೇ ೬೩ ರಷ್ಟು ಅರ್ಜಿ ತೀರಸ್ಕಾರ:

      ಕರ್ನಾಟಕ ರಾಜ್ಯದಲ್ಲಿ ೨,೯೫,೦೪೮ ಅರ್ಜಿ ಅರಣ್ಯ ಹಕ್ಕು ಕಾಯಿದೆಯಲ್ಲಿ ಸಲ್ಲಿಸಿದ್ದು, ಅವುಗಳಲ್ಲಿ ಒಂದು ೧,೮೪,೩೫೮ ಅರ್ಜಿ ತೀರಸ್ಕಾರವಾಗಿದ್ದು ಶೇ. ೬೩ ರಷ್ಟು ಅರ್ಜಿ ತೀರಸ್ಕಾರವಾಗಿರುತ್ತದೆ. ರಾಜ್ಯದಲ್ಲಿ ಇಂದಿನವರೆಗೆ ಕೇವಲ ೧೫,೭೯೮ ಅರ್ಜಿಗೆ ಹಕ್ಕು ದೊರಕಿದ್ದು, ಬಂದಿರುವAತಹ ಅರ್ಜಿಯಲ್ಲಿ ಹಕ್ಕು ಪತ್ರ ಸಿಕ್ಕಿರುವಂತದ್ದು ಕೇವಲ ಶೇ ೫.೪೦ ರಷ್ಟು ಮಾತ್ರ ಎಂದು ಚರ್ಚೆಯ ಸಂದರ್ಭದಲ್ಲಿ ಸಿದ್ಧರಾಮಯ್ಯ  ಅವರಿಗೆ ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top