ಶಿರಸಿ: ಎಂ ಇ ಎಸ್ ನ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್ ಸಿ ಸಿ ಕೆಡೆಟ್ಸ್ ಗಳಾದ ಬಿಎಸ್ಸಿ ದ್ವಿತೀಯ ವರ್ಗದ ವಿದ್ಯಾರ್ಥಿ ಎಲಿಶ್ ರೊಡ್ರಿಗ್ಸ್ ಹಾಗೂ ಬಿ ಎ ದ್ವಿತೀಯ ವರ್ಗದ ವಿದ್ಯಾರ್ಥಿ ಶರತ್ ಕೃಷ್ಣ ನಾಯ್ಕ್ ನಾಲ್ಕು ತಿಂಗಳ ಆರ್ ಡಿ ಕ್ಯಾಂಪಿಗೆ ಆಯ್ಕೆ ಯಾಗಿ ಒಂದು ತಿಂಗಳು ಬೆಳಗಾವಿಯಲ್ಲಿ, ಒಂದು ತಿಂಗಳು ಬೆಂಗಳೂರಿನಲ್ಲಿ ಮತ್ತು ೪೫ ದಿನ ದೆಹಲಿಯಲ್ಲಿ ನಡೆದ ಕ್ಯಾಂಪ್ ನಲ್ಲಿ ಯಶಸ್ವಿಯಾಗಿ ಪಾಲ್ಗೊಂಡು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿ ಮಹತ್ ಸಾಧನೆ ಮಾಡಿದ್ದು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.
ಇವರಿಗೆ ಎನ್ ಸಿ ಸಿ ಅಧಿಕಾರಿ ಡಾ ಟಿ ಎಸ್ ಹಳೆಮನೆ ಅವರು ಮಾರ್ಗದರ್ಶಿಸಿದ್ದರು. ವಿದ್ಯಾರ್ಥಿಗಳ ಈ ಸಾಧನೆಗೆ ಎಂ ಇ ಎಸ್ ನ ಅಧ್ಯಕ್ಷರು ಪದಾಧಿಕಾರಿಗಳು, ಕಾಲೇಜು ಉಪಸಮಿತಿ ಅಧ್ಯಕ್ಷರು ಸದಸ್ಯರು, ಪ್ರಾಚಾರ್ಯರು ಬೋಧಕ ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ.