ಅಂಕೋಲಾ: ಪ್ರತಿಯೊಬ್ಬರ ಭಾವನೆಗಳು ಬೇರೆ ಬೇರೆ ಆದರೆ ನಮ್ಮೆಲ್ಲರ ಕುಲವೊಂದೇ ಅದೇ ಮನುಕುಲ ಅಂತಹ ಮನುಕುಲದಲ್ಲಿ ಮೋಸ ಮಾಡುವವರು ಇದ್ದಾರೆ ಆದರೆ ಅಂಥವರನ್ನು ಗುರುತಿಸಿ ಜಾಗೃತರಾಗುವ ಜಾಣ್ಮೆ ಅಗತ್ಯ ಅಂತ ಜಾಣ್ಮೆ ಬರಬೇಕಾದರೆ ನಿರಂತರ ಅಧ್ಯಯನ ಅಗತ್ಯ ಎಂದು ನಿವೃತ್ತ ಮುಖ್ಯ ಶಿಕ್ಷಕರಾದ ಹಸನ್ ಶೇಕ್ ಹೇಳಿದರು.
ಅವರು ಸ್ಥಳೀಯ ಕೆಎಲ್ಇ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರತ್ವ ತರಬೇತಿ ಶಿಬಿರದ ವಿಶೇಷ ಉಪನ್ಯಾಸದಲ್ಲಿ ವಿವಿಧತೆ ಸೃಷ್ಟಿಯ ವೈವಿಧ್ಯತೆ ವಿಷಯದ ಮೇಲೆ ಮಾತನಾಡುತ್ತಾ ಎಲ್ಲಾ ಧರ್ಮದ ಗ್ರಂಥಗಳ ಅಧ್ಯಯನ ಮಾಡಬೇಕು ಅವೆಲ್ಲದರ ಸಾರ ಧರ್ಮದ ರಕ್ಷಣೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪನ್ಯಾಸಕ ರಾಘವೇಂದ್ರ ಅಂಕೊಲೇಕರ್ ಜಗತ್ತಿನಲ್ಲಿ ಜೀವಿಗಳ ಸೃಷ್ಟಿ ವಿಭಿನ್ನವಾಗಿದ್ದರೂ ಸನ್ನಿವೇಶಗಳೊಂದಿಗೆ ಹೊಂದಿಕೊಂಡು ಜೀವಿಸುತ್ತದೆ ಅದು ಸೃಷ್ಟಿಯ ವಿಶೇಷ ಎಂದರು.
ಇದೇ ಸಂದರ್ಭದಲ್ಲಿ ಹಸನ ಶೇಖರ್ ಅವರ ಸಾಮಾಜಿಕ ಕಾರ್ಯವನ್ನು ಸ್ಮರಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕು. ಮಣಿಕಂಠ ಪ್ರಾರ್ಥಿಸಿದರು. ಕುಮಾರ್ ಸತೀಶ್ ದಳವಿ ಸ್ವಾಗತಿಸಿದರು. ಕುಮಾರ್ ಅಭಿಷೇಕ್ ಕೇರೇಕರ್ ಪರಿಚಯಿಸಿದರು ಕು. ಗಣೇಶ್ ಮುಕ್ರಿ ವಂದಿಸಿದರು ಕುಮಾರ್ ಮನೋಜ್ ಗಾವಡಿ ನಿರೂಪಿಸಿದರು.