• first
    second
    third
    previous arrow
    next arrow
  • ಕೊರೊನಾ ಲಸಿಕೆಗೆ ಮುಗಿಬಿದ್ದ ಜನತೆ; ಕುಮಟಾ ತಾಲೂಕಾಸ್ಪತ್ರೆಯಲ್ಲಿ ನೂಕುನುಗ್ಗಲು

    300x250 AD

    ಕುಮಟಾ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆದುಕೊಳ್ಳು ಹೆಚ್ಚಿನ ಜನರು ಬಂದದ್ದರಿಂದ ನೂಕು ನುಗ್ಗಲು ಉಂಟಾಗಿದೆ.
    ಕೊರೊನಾ ಮೂರನೇ ಅಲೆ ಬರುತ್ತದೆ ಎಂಬ ಹಿನ್ನೆಲೆಯಲ್ಲಿ ಲಸಿಕೆ ಪಡೆದುಕೊಳ್ಳಲು ಹೆಚ್ಚಿನ ಜನರು ಬರುತ್ತಿದ್ದಾರೆ. ಅಲ್ಲದೇ ಲಸಿಕಾಗಿ ತಾಮುಂದು ಎಂದು ಆತುರ ಪಡುತ್ತಿರುವ ದೃಶ್ಯವಿತ್ತು. ಇಂದು ಕೋವಿಶೀಲ್ಡ್ ಎರಡನೇ ಡೋಸ್ ಪಡೆಯಲು 150 ಮಂದಿಗೆ ಅವಕಾಶ ಮಾಡಿಕೊಡಲಾಗಿತ್ತು. ಬೆಳಗಿನ ಜಾವ 5 ಗಂಟೆಯಿಂದಲೇ ತಾಲೂಕಾಸ್ಪತ್ರೆಯ ಆವರಣದಲ್ಲಿ ಜಮಾಯಿಸತೊಡಗಿದ ಜನರ ಸಂಖ್ಯೆ ಕೆಲವೇ ಸಮಯದಲ್ಲಿ ನೂರೈವತ್ತನ್ನು ದಾಟಿ ಹೋಗಿದೆ.
    ಟೋಕನ್ ಹಂಚುವಾಗ ತಾರತಮ್ಯ ಮಾಡುತ್ತಿದ್ದಾರೆ, ಆಸ್ಪತ್ರೆಯ ಒಳಗಿದ್ದವರು ಅವರಿಗೆ ಬೇಕಾದವರಿಗೆ ಮೋದಲು ಟೋಕನ್ ಕೊಟ್ಟು ನಂತರ ಹೆಚ್ಚಿದ್ದರೆ ಮಾತ್ರ ಹೊರಗೆ ಕಾಯುತ್ತಾ ಕುಳಿತವರಿಗೆ ಟೋಕನ್ ಹಂಚುತ್ತಾರೆ ಎನ್ನುವ ಆರೋಪ ಸಾರ್ವಜನಿಕ ಗುಂಪಿನಿಂದ ಕೇಳಿಬಂದಿದೆ.
    ತಾಲೂಕಾಸ್ಪತ್ರೆಯ ಆವರಣದಲ್ಲಿ ಸಾಮಾಜಿಕ ಅಂತರ ಮರೆಯಾಗಿದ್ದು ಕೋವಿಶಿಲ್ಟ್ ಪಡೆಯಲು ಬಂದು ಕೊರೊನಾ ಸೋಂಕನ್ನು ಅಂಟಿಸಿಕೊಂಡು ಹೋಗುತ್ತಾರೇನೋ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top