ಕಾರವಾರ: ಧಾರವಾಡ ಕೃಷಿ ವಿಶ್ವವಿದ್ಯಾಲಯದಡಿಯಲ್ಲಿರುವ ಶಿರಸಿ ಅರಣ್ಯ ಮಹಾವಿದ್ಯಾಲಯದಲ್ಲಿ ಫಾರೆಸ್ಟ್ ಪ್ರೊಡಕ್ಟ್ಸ್ ಯುಟಿಲೈಜಶನ್ ಹಾಗೂ ಫಾರೆಸ್ಟ್ ಬಯೋಲಾಜಿ & ಟ್ರಿ ಇಂಪ್ರುಮೆಂಟ್ ವಿಭಾಗದ ತಲಾ 2 ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ತಾತ್ಕಾಲಿಕ ನೇಮಕಾತಿಗಾಗಿ ಫೆ. 23 ರಂದು ಮುಂಜಾನೆ 11 ಗಂಟೆಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ.
ಮಾಸ್ಟರ್ ಡಿಗ್ರಿ ಇನ್ ಫಾರೆಸ್ಟ್ರಿ ವಿತ್ ನೆಟ್ ವಿದ್ಯಾರ್ಹತೆ ಹೊಂದಿರುವವರು ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಸಂದರ್ಶನಕ್ಕೆ ಬರುವಾಗ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳನ್ನು ತರತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಡೀನ್ ಕೆ.ಎಸ್ ಚನ್ನಬಸಪ್ಪ ಶಿರಸಿ ಅರಣ್ಯ ಮಹಾವಿದ್ಯಾಲಯ ಸಂಪರ್ಕಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.