ಕಾರವಾರ: ಶಾಸಕಿ ರೂಪಾಲಿ ನಾಯ್ಕ ಪುತ್ರ ಪರ್ಭತ್ ಹಾಗೂ ಮೈಸೂರಿನ ರೇಖಾ ಅವರ ವಿವಾಹ ಮಹೋತ್ಸವವು ತಾಲೂಕಿನ ದೇವಳಮಕ್ಕಿ ಗ್ರಾಪಂ ವ್ಯಾಪ್ತಿಯ ನಿವಳಿಯಲ್ಲಿ ಹಲವಾರು ಗಣ್ಯರ ನಡುವೆ ಅದ್ಧೂರಿಯಾಗಿ ನೆರವೇರಿತು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಶಿವರಾಮ್ ಹೆಬ್ಬಾರ್, ಅರಣ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ, ನಟಿ ತಾರಾ, ಸಚಿವರಾದ ಜಗದೀಶ್ ಶೆಟ್ಟರ್, ಸಿ.ಟಿ.ರವಿ, ಮುನಿರತ್ನ, ಶಾಸಕ ಆರ್.ವಿ.ದೇಶಪಾಂಡೆ, ಎಂ.ಎಲ್.ಸಿ ಗಣಪತಿ ಉಳ್ವೇಕರ್, ಶಾಸಕ ಸುನೀಲ ನಾಯ್ಕ, ಶಾಂತಾರಾಮ್ ಸಿದ್ದಿ, ಮಾಜಿ ಶಾಸಕ ಸುನೀಲ್ ಹೆಗಡೆ ಸೇರಿದಂತೆ ಅನೇಕ ರಾಜಕೀಯ ಮುಖಂಡರು ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿ, ನೂತನ ವಧು-ವರರಿಗೆ ಆಶೀರ್ವದಿಸಿದರು.
ಸಂಗೀತ ಲೋಕದ ವಿಜಯ ಪ್ರಕಾಶ, ಅನುರಾಧಾ ಭಟ್ಟ ಸೇರಿದಂತೆ ಅನೇಕ ಗಾಯಕರು ಆಗಮಿಸಿ, ತಮ್ಮ ಗಾಯನದ ಮೂಲಕ ಜನರ ಮನಗೆದ್ದರು. ತಾಲೂಕಿನ ನಿವಳಿಯಲ್ಲಿ ವಿಶಾಲವಾದ ಪೆಂಡಾಲ್ ಹಾಕಲಾಗಿತ್ತು. ಸ್ಥಳೀಯರು ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಸಾವಿರಾರು ಸಾರ್ವಜನಿಕರು ವಿವಾಹಕ್ಕೆ ಆಗಮಿಸಿದ್ದರು.