ಕಾರವಾರ: ಇಂದು ನಮ್ಮೆಲ್ಲರನ್ನು ಅಗಲಿದ ಲತಾ ಮಂಗೇಶ್ಕರ್ ಭಾರತ ದೇಶ ಕಂಡ ಗಾನ ಕೋಗಿಲೆ ಎಂದೇ ಪ್ರಸಿದ್ಧರಾದವರು. ಅವರು ಅನಾರೋಗ್ಯ ಬಳಲುತ್ತಿರುವುದು ನಮಗೆಲ್ಲ ತಿಳಿದಿದ್ದರೂ ಸಹ ಅವರ ಅಗಲಿಕೆಯಿಂದ ಮನಸ್ಸಿಗೆ ನೋವುಂಟಾಗಿದೆ ಎಂದು ನಟಿ ತಾರಾ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರ ಹಾಡುಗಳು ನಮ್ಮ ಕಿವಿಯಲ್ಲಿ ಸದಾ ಗುನುಗುತ್ತಿರಲಿ ಆದರೆ ಅವರ ನೆನಪು ಮಾತ್ರ ನನಗೆ ಸದಾ ನೆನಪಿಸುತ್ತಿರುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮಾದ್ಯಮದವರೊಂದಿಗೆ ತಮ್ಮ ನೋವು ಹಂಚಿಕೊಂಡರು.