ಕಾರವಾರ: ಯಾವುದೆ ಕಾರಣಕ್ಕೂ ಶಾಲೆಯಲ್ಲಿ ಹಿಜಾಬ್ ಧರಿಸುವುದು ಸರಿಯಲ್ಲ,ಸಮವಸ್ತ್ರ ಒಂದೇ ಕಡ್ಡಾಯ. ಮತಿಯವಾದಕ್ಕೆ ಪ್ರೋತ್ಸಾಹ ಕೊಡುವುದನ್ನು ಕಾಂಗ್ರೇಸ್ ಬಿಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕಿಡಿಕಾರಿದ್ದಾರೆ.
ಕಾರವಾರದಲ್ಲಿ ಶಾಸಕಿ ರೂಪಾಲಿ ನಾಯ್ಕ್ ಮಗನ ಮದುವೆ ಕಾರ್ಯದಲ್ಲಿ ಭಾಗಿಯಾಗಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಶಿಕ್ಷಣ ಸಂಸ್ಥೆಯಲ್ಲಿ ಮತಿಯವಾದ ಮತ್ತು ಪ್ರತ್ಯೇಕವಾದ ಸೃಷ್ಟಿಸುವುದು ಸಮಂಜಸವಲ್ಲ. ಮತಿಯವಾದಕ್ಕೆ ಪ್ರೋತ್ಸಾಹ ಕೊಡುವದನ್ನು ಕಾಂಗ್ರೇಸ್ ಬಿಡಬೇಕು ಶಾಲೆಯಲ್ಲಿ ವಿಭಜನೆ ಸೂತ್ರ ಅಳವಡಿಸೋದು ಭಾರತ ವಿಭಜನೆಕ್ಕಿಂತ ಅಪಾಯಕಾರಿಯಾಗಿದೆ. ಮತೀಯವಾದದ ಬೀಜ ಭಿತ್ತಿ ದೇಶವನ್ನು ಮತ್ತಷ್ಟು ತುಂಡರಿಸುವ ಸಂಚು ನಡೆಯುತ್ತಿದೆ. ಇದಕ್ಕೆ ನಾವು ಯಾವುದೇ ಆಸ್ಪದ ನೀಡುವುದಿಲ್ಲ ಎಂದರು.
ಮುಸ್ಲಿಂ ಹೆಚ್ಚಿರುವ ಶಾಲೆಗಳಲ್ಲಿ ಬುರ್ಖಾವನ್ನೇ ಸಮವಸ್ತ್ರ ಮಾಡಿದ್ರೆ ಫ್ರಾನ್ಸ್, ಚೀನಾ, ನೆದರ್‌ಲ್ಯಾಂಡ್ ಏನು ಮಾಡಿದ್ಯೋ ಅದನ್ನೇ ನಾವೂ ಮಾಡುತ್ತೇವೆ. ಚೀನಾ ಬರೀ ಬುರ್ಖಾ ಮಾತ್ರವಲ್ಲ, ಮದರಸಾವನ್ನು ಕೂಡಾ ಬ್ಯಾನ್ ಮಾಡಿದೆ. ಎಡಚರರು ಈ ವಿಷಯದಲ್ಲಿ ಚೀನಾ ಏನು ಮಾಡಿದೆ ಎನ್ನುವದನ್ನು ಸ್ವಲ್ಪ ನೋಡಬೇಕು ಎಂದರು.
ಮುಸ್ಲಿಂ ಪ್ರಾಬಲ್ಯವಿರುವ ದೇಶಗಳು ಯಾಕೆ ಕಡ್ಡಾಯ ಮಾಡಿಲ್ಲ ಎನ್ನುವುದನ್ನೂ ಬೇಕಾದರೆ ನೋಡಲಿ, ನಂತರದ ದಿನಗಳಲ್ಲಿ ದೇಶಕ್ಕೆ ಅಪಾಯಕಾರಿಯಾದ್ರೆ ಮದರಸವನ್ನು ಕೂಡಾ ಬ್ಯಾನ್ ಮಾಡಬೇಕಾಗುತ್ತದೆ. ಹಿಜಾಬ್ ವಿವಾಧದ ಹಿಂದೆ ಮುಸ್ಲಿಂ ಸಂಘಟನೆಯ ಹಿಡನ್ ಅಜೆಂಡಾ ಇದೆ. ಹಿಜಾಬ್ ವಿವಾಧಕ್ಕೆ ಸಂಭಂದಿಸಿ ಸಿದ್ದರಾಮಯ್ಯನವರು ಜಿನ್ನಾ ಭೂತ ಬಂದೋರ ಹಾಗೆ ಮಾಡುತ್ತಿದ್ದಾರೆ. ಹಿಜಾಬ್ ವಿವಾಧದ ಹಿಂದೆ ಕಾಂಗ್ರೇಸ್ ಕೈವಾಡ ಇದೆ ಎಂದರು.