ಕಾರವಾರ: ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಮಾರ್ಚ ತಿಂಗಳಿನಲ್ಲಿ 5 ದಿನಗಳವರೆಗೆ ರಾಷ್ಟ್ರೀಯ ಕನ್ನಡ ಸಂಶೋಧನಾ ಕಮ್ಮಟ ಹಮ್ಮಿಕೊಂಡಿದ್ದು, ಕಮ್ಮಟದ ಪರ್ಯಾಯ ಗೋಷ್ಠಿಯಲ್ಲಿ ರಾಷ್ಟ್ರೀಯ ಕನ್ನಡ ಸಂಶೋಧನಾ ಕುರಿತಾಗಿ ಪ್ರಬಂಧ ಮಂಡಿಸುವವರು ಫೆ.22 ರೊಳಗಾಗಿ ಅರ್ಜಿಯೊಂದಿಗೆ ಪ್ರಬಂಧವನ್ನು ಅಕಾಡೆಮಿಗೆ ರಿಜಿಸ್ಟರ್ ಅಂಚೆ ಅಥವಾ ಕೊರಿಯರ್ ಮೂಲಕ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿ ವೆಬ್‍ಸೈಟ್ http://sahityaacademy.karnataka.gov.in ನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟಾರ್ ಕರಿಯಪ್ಪಾ ಎನ್ ತಿಳಿಸಿದ್ದಾರೆ.