• Slide
    Slide
    Slide
    previous arrow
    next arrow
  • ಬಾಳಿಗಾ ಕಾಲೇಜಿನ ಇಬ್ಬರು ಬೋಧಕರಿಗೆ ರಾಷ್ಟ್ರ ಪ್ರಶಸ್ತಿ ಪತ್ರ

    300x250 AD

    ಕುಮಟಾ : ಭಾರತ ಸರಕಾರದ ಶಿಕ್ಷಣ ಮಂತ್ರಾಲಯದ ಉನ್ನತ ಶಿಕ್ಷಣ ವಿಭಾಗ ನವದೆಹಲಿ ಇದರ ಆಶ್ರಯದಲ್ಲಿ ‘ರಾಷ್ಟ್ರೀಯ ಮಹಾತ್ಮಾಗಾಂಧಿ ಗ್ರಾಮೀಣ ಶಿಕ್ಷಣ ಪರಿಷತ್’ ಇವರು ನಡೆಸಿದ 5 ದಿನಗಳ ಆನ್‍ಲೈನ್ ಬೋಧಕರ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮವು ‘ಗ್ರಾಮೀಣ ಸಮುದಾಯದ ಪಾಲ್ಗೊಳ್ಳುವಿಕೆಗೆ ಪ್ರೋತ್ಸಾಹ ಮತ್ತು ಸಾಂಸ್ಥಿಕ, ಸಾಮಾಜಿಕ ಮಾರ್ಗದರ್ಶನ’ ವಿಷಯದ ಅಡಿಯಲ್ಲಿ ವಿಭಿನ್ನ ಚಟುವಟಿಕೆಗಳು, ಸಂವಾದ, ಪಾತ್ರನಿರ್ವಹಣೆ, ಸಮುದಾಯದ ಅಧ್ಯಯನದೊಂದಿಗೆ ಕಾರ್ಯಯೋಜನೆ ರೂಪಿಸುವಿಕೆ ಇವುಗಳಲ್ಲಿ ಭಾಗವಹಿಸಿದ ಬೋಧಕ ಸಿಬ್ಬಂದಿಗಳಿಗೆ ಅವುಗಳ ಪ್ರಸ್ತುತ ಪಡಿಸುವಿಕೆಗೆ ಅವಕಾಶ ನೀಡಲಾಯಿತು.

    ಇದರಲ್ಲಿ ಭಾಗವಹಿಸಿದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಪ್ರೀತಿ ಪಿ. ಭಂಡಾರಕರ ಹಾಗೂ ಡಾ. ವಿನಾಯಕ ಕೆ. ಭಟ್ಟ ಇವರು ಫಲಶೃತಿಯಲ್ಲಿ ಸೂಕ್ತ ಅಂಕಗಳನ್ನು ಗಳಿಸಿ ಪ್ರಶಸ್ತಿ ಪತ್ರಗಳನ್ನು ಪಡೆದಿರುತ್ತಾರೆ.

    ಮುಂದೆ ರಾಷ್ಟ್ರೀಯ ಮಹಾತ್ಮಾಗಾಂಧಿ ಗ್ರಾಮೀಣ ಶಿಕ್ಷಣ ಪರಿಷತ್ತಿನ ನಿಯಮಾವಳಿಗಳ ಪ್ರಕಾರ ತಮ್ಮ ಶಿಕ್ಷಣ ಮಹಾವಿದ್ಯಾಲಯದ ಕುರಿತು ಕಾರ್ಯಯೋಜನೆಯನ್ನು ರೂಪಿಸುತ್ತಿದ್ದಾರೆ.

    300x250 AD

    ಇವರನ್ನು ಕೆನರಾ ಕಾಲೇಜ್ ಸೊಸೈಟಿ(ರಿ)ಯ ಅಧ್ಯಕ್ಷರಾದ ರಘು ಕೆ. ಪಿಕಳೆ, ಕಾರ್ಯಾಧ್ಯಕ್ಷರಾದ ದಿನಕರ ಎಮ್. ಕಾಮತ, ಕಾರ್ಯದರ್ಶಿಗಳಾದ ಸುಧಾಕರ ವಿ. ನಾಯಕ, ಆಡಳಿತ ಮಂಡಳಿ ಸದಸ್ಯರುಗಳು ಹಾಗೂ ಕೌನ್ಸಿಲ್ ಸದಸ್ಯರುಗಳು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top