ಅಂಕೋಲಾ : ತಾಲೂಕಿನ ಡೋಂಗ್ರಿ ಪಂಚಾಯತದ ಗುಳ್ಳಾಪುರ, ಹಳವಳ್ಳಿ,ಕಮ್ಮಾಣಿ ರಸ್ತೆಯ ಮುಂದುವರಿದ ಭಾಗದ ಶಂಕುಸ್ಥಾಪನೆ ಶುಕ್ರವಾರ ನಡೆಯಿತು. ಶಾಸಕಿ ರೂಪಾಲಿ ನಾಯ್ಕ ಅವರ ವಿಶೇಷ ಕಾಳಜಿಯಿಂದ ಅವರ ಅನುಪಸ್ಥಿತಿಯಲ್ಲಿ ಪಂಚಾಯತ ಅಧ್ಯಕ್ಷೆ ಲತಾ ನಾಯ್ಕ ಇವರು ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಂಚಾಯತ ಉಪಾಧ್ಯಕ್ಷರಾದ ವಿನೋದ್ ಭಟ್ಟ ,ಬಿಜೆಪಿ ರೈತ ಮೋರ್ಚಾ ಜಿಲ್ಲಾ ಪ್ರಭಾರಿ ಗೋಪಾಲಕೃಷ್ಣ ವೈದ್ಯ.ರೈತ ಮೋರ್ಚಾ ತಾಲೂಕಾ ಅಧ್ಯಕ್ಷರಾದ ವಿ ಎಸ್ ಭಟ್ಟ ಕಲ್ಲೇಶ್ವರ,ಶಕ್ತಿ ಕೇಂದ್ರದ ಅಧ್ಯಕ್ಷರಾದ ನಾರಾಯಣ ಹೆಗಡೆ, ಯುವ ಮೋರ್ಚಾ ಉಪಾಧ್ಯಕ್ಷರಾದ ಶಶಾಂಕ ಹೆಗಡೆ, ರೈತಮೋರ್ಚಾ ಕಾರ್ಯದರ್ಶಿ ಆನಂದ ನಾಯ್ಕ,ಎಸ್ ಎಸ್ಟಿ ಮೋರ್ಚಾ ಸದಸ್ಯರಾದ ನಾಗೇಶ್ ಸಿದ್ದಿ ,ಬೂತ್ ಅಧ್ಯಕ್ಷರುಗಳಾದ ಶ್ರೀಪಾದ ಬೆಳ್ಳಿ,ಸುಧಾಕರ ಭಟ್ಟ ,ಸರ್ವೇಶ್ವರ ಹೆಗಡೆ ,ಶೇಖರ ಗಾಂವ್ಕರ, ಶಿವರಾಮ ಗಾಂವ್ಕರ್ ಕನಕನಹಳ್ಳಿ,ಭಾಸ್ಕರ ಪಟಗಾರ,ಜನಾರ್ಧನ ಹೆಗಡೆ, ಪಂಚಾಯತ ಸದಸ್ಯರಾದ, ರೇಣುಕಾ ಸಿದ್ದಿ.ನಾರಾಯಣ ಭಟ್ಟ, ಮೋಹನ ಪಟಗಾರ,ಹಾಗೂ ಸ್ಥಳೀಯ ಕಾರ್ಯಕರ್ತರು ಹಾಗೂ ಊರನಾಗರಿಕರು ಇದ್ದರು.